- Advertisement -
![]()
- Advertisement -
ನವದೆಹಲಿ: ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ ನಡುವಿನ ಜಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ.
ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮೋಹನ್ ಕುಮಾರ್ ಮತ್ತು ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ಆಂಜನೇಯ ಇಬ್ಬರಿಗೂ
ದೆಹಲಿ ಕರ್ನಾಟಕ ಭವನದ ನಿವಾಸಿ ಆಯುಕ್ತರಿಂದ ನೋಟೀಸ್ ನೀಡಲಾಗಿದೆ.
ಇಬ್ಬರೂ ಅಧಿಕಾರಿಗಳು ಪರಸ್ಪರ ದೂರು ನೀಡಿದ್ದ ಹಿನ್ನೆಲೆಯಲ್ಲಿ
ಐದು ದಿನಗಳಲ್ಲಿ ಉತ್ತರಿಸುವಂತೆ ಇಬ್ಬರಿಗೂ ನೋಟೀಸ್ ನೀಡಲಾಗಿದೆ.
ಮೋಹನ್ ಕುಮಾರ್ ಮತ್ತು ಆಂಜನೇಯ ನಡುವೆ ಕಳೆದ ವಾರ ಜಗಳ ತಾರಕಕ್ಕೇರಿತ್ತು. ಈ ಮಧ್ಯೆ ಆಂಜನೇಯ ವಿರುದ್ಧ ಮಹಿಳಾ ಸಿಬ್ಬಂದಿಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು.
- Advertisement -


