Thursday, June 25, 2026
Homeಪ್ರಮುಖ-ಸುದ್ದಿಮುನಿಸು ಮರೆತು ಜೊತೆಯಾಗಿ ಚಲನಚಿತ್ರ ವೀಕ್ಷಿಸಿದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು

ಮುನಿಸು ಮರೆತು ಜೊತೆಯಾಗಿ ಚಲನಚಿತ್ರ ವೀಕ್ಷಿಸಿದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು

- Advertisement -
- Advertisement -

ಬಳ್ಳಾರಿ: ಪರಸ್ಪರ ಮುನಿಸಿಕೊಂಡಿದ್ದ ಶಾಸಕ ಜಿ. ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಈಗ ಜೊತೆಯಾಗಿದ್ದು ಜ್ಯೂನಿಯರ್ ಚಲನಚಿತ್ರ ವೀಕ್ಷಣೆ ಮಾಡಿದ್ದಾರೆ.

ಬಳ್ಳಾರಿಯ ನಟರಾಜ್ ಚಿತ್ರಮಂದಿರದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಅಭಿನಯದ ಜೂನಿಯರ್ ಸಿನಿಮಾವನ್ನು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆಯಾಗಿ ವೀಕ್ಷಣೆ ಮಾಡಿದ್ದಾರೆ.

ಕಿರೀಟಿ ನಾಯಕ ನಟನಾಗಿ ಅಭಿನಯಿಸಿರುವ ಕನ್ನಡ ಚಲನಚಿತ್ರ ಜ್ಯೂನಿಯರ್ ಕೆಲವು ದಿನಗಳ ಹಿಂದೆ ತೆರೆ ಕಂಡಿದೆ.ಇತ್ತೀಚೆಗೆ ರೆಡ್ಡಿ ಮತ್ತು ಶ್ರೀರಾಮುಲು‌ ನಡುವೆ ವಿರಸ ಮೂಡಿ ಪರಸ್ಪರರ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಆರೋಪಿಸುವ ಮಟ್ಟಕ್ಕೆ ಮುನಿಸು ಉಂಟಾಗಿತ್ತು

ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಇಬ್ಬರನ್ನೂ ಒಂದು ಮಾಡಲಾಗಿತ್ತು.

- Advertisement -

Latest News

error: Content is protected !!