Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡು: ರಂಗಕರ್ಮಿ ಎಂ.ಎಸ್.ಗೋಪಾಲಕೃಷ್ಣ ರಾವ್ ನಿಧನ

ಕಾಸರಗೋಡು: ರಂಗಕರ್ಮಿ ಎಂ.ಎಸ್.ಗೋಪಾಲಕೃಷ್ಣ ರಾವ್ ನಿಧನ

- Advertisement -
- Advertisement -

ಕಾಸರಗೋಡು: ಎಂ.ಎಸ್.ಗೋಪಾಲಕೃಷ್ಣ ರಾವ್
ಕಾಸರಗೋಡು ಜಿಲ್ಲೆ ಮಂಜೇಶ್ವರದ ಸುಂಕದಕಟ್ಟೆ ನಿವಾಸಿ, ಪ್ರಸ್ತುತ ತಲಪಾಡಿಯ ಉಚ್ಚಿಲ ನಿವಾಸಿಯಾಗಿದ್ದ ರಂಗಕರ್ಮಿ ಎಂ.ಎಸ್.ಗೋಪಾಲಕೃಷ್ಣ ರಾವ್ (೭೦) ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.೨೫ರಂದು ಆಸ್ಪತ್ರೆಯಲ್ಲಿ ನಿಧನರಾದರು.

ಸುಮಾರು ಮೂರು ದಶಕಗಳ ಕಾಲ ಕ್ಯಾಂಪ್ಕೋ ಸಂಸ್ಥೆಯ ನಾನಾ ಶಾಖೆಗಳಲ್ಲಿ ಸೇವೆ ಸಲ್ಲಿಸಿ, ಪ್ರಬಂಧಕರಾಗಿ ನಿವೃತ್ತರಾಗಿದ್ದರು. ನಾನಾ ಸಂಘ ಸಂಸ್ಥೆಗಳಲ್ಲಿ ನಾನಾ ಹುದ್ದೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು. ಸ್ಥಳೀಯ ರಂಗ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದ ಅವರು, ಹತ್ತು ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಗಣರಾಜ್ಯೋತ್ಸದಲ್ಲಿ ರಾಜ್ಯದ ಸಾಂಸ್ಕೃತಿಕ ತಂಡವನ್ನು ಪ್ರತಿನಿದಿಸಿ ಅಂದಿನ ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾ ಅವರಿಂದ ಪುರಸ್ಕಾರ ಪಡೆದಿದ್ದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.

- Advertisement -

Latest News

error: Content is protected !!