- Advertisement -
![]()
- Advertisement -
ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತಿಟ್ಟ ಪ್ರಕರಣದ ತನಿಖೆಯ ಹೊಣೆಯನ್ನು ಎಸ್.ಐ.ಟಿ ಸಂಸ್ಥೆ ನೀಡಿ 20 ಅಧಿಕಾರಿಗಳ ನೇಮಕ ಮಾಡಿ ಜುಲೈ 22 ರಂದು ಡಿಜಿಪಿ ಸಲೀಂ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಮಂಗಳೂರು DCRE ಎಸ್ಪಿಯಾಗಿರುವ ಸಿ.ಎ.ಸೈಮನ್ ಅವರೂ ಇದ್ದಾರೆ. ಆದ್ರೆ ಹಿರಿಯ ಅಧಿಕಾರಿಗೆ ಸಿ.ಎ.ಸೈಮನ್ ಅವರು ತಾನು ಮಂಗಳೂರಿನಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಪದವಿಯನ್ನು ಮಾಡಿರುತ್ತೇನೆ. ಆ ಕಾರಣದಿಂದ ತನಿಖೆಯ ಪಟ್ಟಿಯಿಂದ ಕೈಬಿಡಬೇಕು ಎಂದು ಪತ್ರ ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
- Advertisement -


