- Advertisement -
![]()
- Advertisement -
ಬಂಟ್ವಾಳ: ಹಿರಿಯ ತುಳು ರಂಗಭೂಮಿ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ (68) ಅವರು ಜು.23ರ ಬುಧವಾರದಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.
ಇವರು ಕಲ್ಲಡ್ಕ ಕೊಳಕೀರು ನಿವಾಸಿಯಾಗಿದ್ದು, ಕಳೆದ ಹಲವು ದಶಕಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಅವರು ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20 ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡಿದ್ದು, ತುಳು ರಂಗಭೂಮಿಯಲ್ಲಿ ಹೊಸ ಇತಿಹಾಸ ಬರೆದ ಶಿವಧೂತೆ ಗುಳಿಗೆ ನಾಟಕದಲ್ಲಿ ಭೀಮಾರಾವ್ ಪಾತ್ರದಲ್ಲಿ ಮಿಂಚಿದ್ದರು.
ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಶಿವಾಜಿ ಮೊದಲಾದವು ಇವರು ಪ್ರಮುಖ ನಾಟಕಗಳು.
- Advertisement -


