Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಕೇರಳದ ನಕ್ಸಲ್ ರೂಪೇಶ್ ನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಬೆಳ್ತಂಗಡಿ : ಕೇರಳದ ನಕ್ಸಲ್ ರೂಪೇಶ್ ನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ನಕ್ಸಲ್ ಮತ್ತು ಪೊಲೀಸರ ನಡುವೆ ಗುಂಡಿನ ದಾಳಿ ಪ್ರಕರಣದಲ್ಲಿ ತನಿಖೆಗಾಗಿ ಕೇರಳ ಜೈಲಿನಲ್ಲಿರುವ ನಕ್ಸಲ್ ಕೇರಳ ರಾಜ್ಯದ ತ್ರಿಶೂಲ್ ಜಿಲ್ಲೆಯ ಪೆರಿಂಗೊಟ್ಟುಕರ ನಿವಾಸಿಯಾಗಿರುವ ರೂಪೇಶ್.ಪಿ.ಆರ್(57) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಾಡಿ ವಾರೆಂಟ್ ಮೂಲಕ ಜುಲೈ 22 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಹೆಚ್ಚಿನ ತನಿಖೆಗಾಗಿ 7 ದಿನ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮ ಬೊಳ್ಳೆ ಪ್ರದೇಶದಲ್ಲಿ 10-12-2012 ರಂದು ನಡೆದ ನಕ್ಸಲ್ – ಪೊಲೀಸ್ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಸದಾಶಿವ ಚೌಧರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕೇರಳ ರಾಜ್ಯದ ತ್ರಿಶೂಲ್ ಜಿಲ್ಲೆಯ ನಿವಾಸಿ ನಕ್ಸಲ್ ರೂಪೇಶ್ ಎಂಬಾತ 2015 ರಲ್ಲಿ ಕೊಯಮುತ್ತುರಿನಲ್ಲಿ ಪೊಲೀಸರಿಗೆ ಕಳೆದ ಹತ್ತು ವರ್ಷಗಳಿಂದ ಕೇರಳ ರಾಜ್ಯದ ತ್ರಿಶೂಲ್ ಜಿಲ್ಲೆಯ ವಿಯ್ಯೂರು ಜೈಲಿನಲ್ಲಿದ್ದು. ಈತನಿಗೆ ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಈತನ ವಿರುದ್ಧ ವಿವಿಧ ರಾಜ್ಯಗಳಲ್ಲಿ 37 ಪ್ರಕರಣ ಇದ್ದು.ಇದರಲ್ಲಿ 17 ಪ್ರಕರಣ ತನಿಖೆಯಲ್ಲಿ ಬಾಕಿ ಉಳಿದಿದೆ. ಈತನನ್ನು ಒಂದು ಪ್ರಕರಣದಲ್ಲಿ ತನಿಖೆ ನಡೆಸಲು ತನಿಖಾಧಿಕಾರಿಯಾಗಿರುವ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲಿದ್ದಾರೆ. ಈತನನ್ನು ಬೆಳ್ತಂಗಡಿ ಪೊಲೀಸರು ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ. ರೂಪೇಶ್ ನನ್ನು ಕೇರಳ ಪೊಲೀಸರು ಬಿಗಿ ಭದ್ರತೆಯಲ್ಲಿ ಕರೆತಂದಿದ್ದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬೆಳ್ತಂಗಡಿ ನ್ಯಾಯಾಲಯದಲ್ಲಿ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಗಿ ಭದ್ರತೆ ವಹಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳೆ ಪರಿಸರದಲ್ಲಿ 10-12-2012 ರಂದು ನಕ್ಸಲ್ ರಾದ ವಿಕ್ರಂ ಗೌಡ ,ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ, ಕುಪ್ಪು ಸ್ವಾಮಿ, ಸುಂದರಿ,ರೂಪೇಶ್.ಪಿ.ಆರ್ ತಂಡದವರು ಬೊಳ್ಳೆ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಇದ್ದ ಬಗ್ಗೆ ಮಾಹಿತಿ ಮೇರೆಗೆ ಪೊಲೀಸ್ ಕಾರ್ಯಾಚರಣೆ ವೇಳೆ  ಗುಂಡಿನ ಚಕಮಕಿ ದಾಳಿ ನಡೆಸಿದ್ದರು. ಇದರಲ್ಲಿ ಪೊಲೀಸ್ ಸಿಬ್ಬಂದಿ ಸದಾಶಿವ ಚೌಧರಿ ಗಾಯಗೊಂಡಿದ್ದರು. ಈ ಮೊದಲು ನಕ್ಸಲರಾದ ಸಾವಿತ್ರಿ ಮತ್ತು ಬಿ.ಜಿ.ಕೃಷ್ಣಮೂರ್ತಿಯನ್ನು ಬೆಳ್ತಂಗಡಿ ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರೆಂಟ್ ಪಡೆದು ಮೂರು ದಿನ ತನಿಖೆ ಮಾಡಿ ಕಳುಹಿಸಿದ್ದರು.

- Advertisement -

Latest News

error: Content is protected !!