Thursday, June 4, 2026
Homeಕರಾವಳಿಪಂಪ್‌ವೆಲ್ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಪಘಾತ ಪ್ರಕರಣ ಕಂಟೈನರ್ ಲಾರಿ ಚಾಲಕನಿಗೆ 6 ತಿಂಗಳು ಶಿಕ್ಷೆ ಹಾಗೂ ದಂಡ

ಪಂಪ್‌ವೆಲ್ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಪಘಾತ ಪ್ರಕರಣ ಕಂಟೈನರ್ ಲಾರಿ ಚಾಲಕನಿಗೆ 6 ತಿಂಗಳು ಶಿಕ್ಷೆ ಹಾಗೂ ದಂಡ

- Advertisement -
- Advertisement -

ಮಂಗಳೂರು: ನಂತೂರು ವೃತ್ತ ಮತ್ತು ಪಂಪ್‌ವೆಲ್ ನಡುವಿನ 2021ರ ಸೆಪ್ಟೆಂಬರ್ 28ರಂದು ನಡೆದ ಭೀಕರ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಜೆಎಂಎಫ್‌ಸಿ ಮೂರನೇ ನ್ಯಾಯಾಲಯ ಮಹತ್ವದ ತೀರ್ಪನ್ನು ಹೊರಡಿಸಿದೆ.

ದ್ವಿಚಕ್ರ ವಾಹನ ಸವಾರ ಮಾನಸ್ ರಾಮನಾಥ್ ಉಗಲೆ (23) ಅವರ ಸಾವಿಗೆ ಕಾರಣನಾದ ಮೀನು ಸಾಗಾಟದ ಕಂಟೈನರ್ ಲಾರಿ ಚಾಲಕ ಮೊಹಮ್ಮದ್ ಜಾಫರ್ ಸಾಬ್(32) ಎಂಬಾತನಿಗೆ ಮಂಗಳೂರಿನ ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ ಇ.ಎಸ್ ಅವರು ಆರು ತಿಂಗಳ ಜೈಲು ಶಿಕ್ಷೆ ಮತ್ತು 9,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಅಪಘಾತದ ಸಂಬಂಧ ಕದ್ರಿ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಅವರು ಚಾಲಕನ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇನ್ನು ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ರೈ ಅವರು ಸಾಕ್ಷಿಗಳನ್ನು ವಿಚಾರಣೆ ಮಾಡಿ, ವಾದ ಮಂಡಿಸಿದ್ದಾರೆ.

- Advertisement -

Latest News

error: Content is protected !!