
ಉಡುಪಿ: ವೃದ್ಧೆಯನ್ನು ನೋಡಿಕೊಳ್ಳಲು ಮನೆಯಲ್ಲಿದ್ದ ಯುವತಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಕೋಟ ಸಮೀಪ ನಡೆದಿದೆ. ಸಾಗರ ಮೂಲಕ ಶೀಲ ಕಳ್ಳತನ ಮಾಡಿದ ಯುವತಿ.
ಬ್ರಹ್ಮಾವರದ ಪಾಡೇಶ್ವರ ನಿವಾಸಿ ಸಿಪ್ರಿಯನ್ ಡಿ ಅಲ್ಮೆಡಾ (62) ಪಾಂಡೇಶ್ವರ ಗ್ರಾಮ ಬ್ರಹ್ಮಾವರ ತಾಲೂಕು ಇವರು ದುಬೈನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರ ತಾಯಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರಿಂದ ಊರಿಗೆ ಮರಳಿರುತ್ತಾರೆ. ಅವರನ್ನು ನೋಡಿಕೊಳ್ಳಲು ಎಜೆನ್ಸಿಯವರು ಹೋಂ ನರ್ಸ್ ಆಗಿ ಸಾಗರ ತಾಲೂಕಿನ ಚಾಮಗಾರ ಕೇರಿ ನಿವಾಸಿ ಶೀಲ ಎಂಬುವವರನ್ನು ಕಳುಹಿಸಿಕೊಟ್ಟಿರುತ್ತಾರೆ. ಶೀಲಳು ತನ್ನ ಗಂಡ ಮಣಿ @ ಲೋಹಿತ್ , ಮೈದುನ ಸಂತೋಷ್ ಮತ್ತು ಅತ್ತೆ (ಮಣಿಯ ತಾಯಿ) ಎಂದು ಪರಿಚಯಿಸಿ ಕೊಟ್ಟಿರುತ್ತಾಳೆ. ಶೀಲಳು ಸಿಪ್ರಿಯನ್ ಡಿ ಅಲ್ಮೆಡಾ ಸುಮಾರು ದಿನಗಳ ಕಾಲ ಮನೆಯಲ್ಲಿ ಕೆಲಸ ಮಾಡಿ ದಿನಾಂಕ:27/05/2025 ರಂದು ಆಕೆಯ ಮಗನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಊರಿಗೆ ಹೋಗುತ್ತೇನೆ ಎಂದು ತಿಳಿಸಿ ಊರಿಗೆ ಹೋಗಿರುತ್ತಾಳೆ.
ದಿನಾಂಕ:28/05/2025 ರಂದು ಸಿಪ್ರಿಯನ್ ಡಿ ಅಲ್ಮೆಡಾ ತಾಯಿಯ ಚಾಕರಿ ಮಾಡಿ ಕೋಣೆಗೆ ಹೋಗಿ ಕಪಾಟಿನಲ್ಲಿ ಲಾಕರ್ ತೆಗೆದು ನೋಡಿದಾಗ ಡ್ರಾವರ್ ನಲ್ಲಿ ಇದ್ದ ದುಮಾರು 5,00,000/- ಕ್ಕೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳು , 87,000/- ಹಣ, 1,10,000/- ಚೂರಿ ಸೆಟ್ ಹಾಗೂ 78,000/- ಬೆಲೆ ಬಾಳುವ ಪಾತ್ರೆ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಂತರ ಇದೇ ವಿಷಯದಲ್ಲಿ ಆರೋಪಿತರನ್ನು ಸಂಪರ್ಕಿಸಿ ಆನಂದಪುರ ಪೊಲೀಸ್ ಠಾಣೆಗೆ ಕರೆಯಿಸಿ ಮಾತು ಕತೆ ನಡೆಸಿ ಕಳುವು ಮಾಡಿಕೊಂಡು ಹೋದ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಅದರಲ್ಲಿ 1,30,000/- ಹಣದ ಬ್ರಾಸ್ಲೈಟ್ ಹಾಗೂ 40,000/- ಹಣವನ್ನು ವಾಪಾಸು ಸಿಪ್ರಿಯನ್ ಡಿ ಅಲ್ಮೆಡಾ ನೀಡಿದ್ದು ಉಳಿದ ಹಣ ಮತ್ತು ಒಡವೆಯನ್ನು ನಂತರದಲ್ಲಿ ಕೊಡುವುದಾಗಿ ತಿಳಿಸಿದ್ದು ಈವರೆಗೂ ಕೊಡದೇ ಇರುವುದಾಗಿರುತ್ತದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


