- Advertisement -
![]()
- Advertisement -
ಉಡುಪಿ: ಆಟೋ ರಿಕ್ಷಾದಲ್ಲಿ ಗೆಳೆಯನನ್ನು ಅವರ ಮನೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಪಡುಬಿದ್ರಿ ಜಂಕ್ಷನ್ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಡೆದಿದೆ. ಮನೋಹರ್ ಟಿ.ಕೋಟ್ಯಾನ್(45) ಮೃತ ವ್ಯಕ್ತಿ. ಘಟನೆಯಲ್ಲಿ ಮನೋಹರ್ ಅವರ ಸ್ನೇಹಿತ ಜಯ ಬೇಂಗ್ರೆ ಘಟನೆಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮನೋಹರ್ ವಿವಾಹಿತರಾಗಿದ್ದರೂ ಕೂಡ ಯಾವುದೋ ಕಾರಣಕ್ಕೆ ಗಂಡ ಹೆಂಡತಿ ದೂರವಾಗಿದ್ದರು, ಸುಮಾರು 14 ವರ್ಷ ಪ್ರಾಯದ ಮಗನೊಬ್ಬನಿದ್ದು ಆತ ತಂದೆಯೊಂದಿಗೆ ವಾಸವಿದ್ದ ಎಂಬುದಾಗಿ ಅವರ ಸ್ನೇಹಿತರು ತಿಳಿಸಿದ್ದಾರೆ.
- Advertisement -


