Thursday, June 4, 2026
HomeUncategorizedಹಾಗ್ಯಾಕೆ ಪೋಸ್ಟ್ ಹಾಕಿದ್ರು ರಾಧಿಕಾ ಪಂಡಿತ್ ? ಅವರ ಬೇಸರಕ್ಕೇನು ಕಾರಣ?

ಹಾಗ್ಯಾಕೆ ಪೋಸ್ಟ್ ಹಾಕಿದ್ರು ರಾಧಿಕಾ ಪಂಡಿತ್ ? ಅವರ ಬೇಸರಕ್ಕೇನು ಕಾರಣ?

- Advertisement -
- Advertisement -

ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟೀವ್ ಆಗಿರುವ ನಟಿಯರಲ್ಲಿ ಒಬ್ಬರು ರಾಧಿಕಾ ಪಂಡಿತ್. ಸದಾ ಏನಾದರೊಂದು ವಿಚಾರಗಳ ಬಗ್ಗೆ ರಾಧಿಕಾ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆದರೆ ಇದೀಗ ರಾಧಿಕಾ ಬೇಸರದಿಂದ ಪೋಸ್ಟ್ ಒಂದನ್ನು ಹಾಕಿದ್ದಾರೆ.

ಅಂದ್ಹಾಗೆ ಅವರ ಬೇಸರಕ್ಕೆ ಕಾರಣ ಕೂಡ ಅವರೇ ಹೇಳಿದ್ದಾರೆ.  ಕೊರೋನಾ ನಮ್ಮೆಲ್ಲರ ದೈನಂದಿನ ಬದುಕನ್ನು ಕಿತ್ತುಕೊಂಡಿದೆ. ಎಲ್ಲೂ ಹೊರಗೆ ಸುತ್ತಾಡುವಂತಿಲ್ಲ, ಮಜಾ ಮಾಡುವಂತಿಲ್ಲ. ಒಂದು ರೀತಿಯ ಕಟ್ಟು ನಿಟ್ಟಿನ ಬದುಕು. ಇದರಿಂದಾಗಿ ತಾನು ಹಲವು ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ನಟಿ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.

ಕೊರೋನಾದಿಂದಾಗಿ ಬೀಚ್ ಗೆ ಹೋಗುವುದನ್ನು, ಅಲ್ಲಿ ಮಕ್ಕಳ ಜತೆ ಆಟವಾಡುವುದನ್ನು, ಫ್ರೆಂಡ್ಸ್ ಭೇಟಿಯಾಗುವುದನ್ನು ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಜೀವನ ಮತ್ತೆ ನಾರ್ಮಲ್ ಆದರೆ ಸಾಕಪ್ಪಾ. ನೀವು ಈ ಸಮಯದಲ್ಲಿ ಏನು ಮಿಸ್ ಮಾಡಿಕೊಳ್ಳುತ್ತೀರಿ ಎಂದು ರಾಧಿಕಾ ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಜತೆಗೆ ಮಿಸ್ ಮಾಡಿಕೊಂಡರೂ ಸದ್ಯದ ಪರಿಸ್ಥಿತಿಯಲ್ಲಿ ನಾವು ಮನೆಯಲ್ಲೇ ಸುರಕ್ಷಿತವಾಗಿರೋಣ ಎಂದು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!