Friday, July 11, 2025
Homeತಾಜಾ ಸುದ್ದಿಅಮೃತಧಾರೆ ಧಾರಾವಾಹಿ ನಟಿಗೆ ಪತಿಯಿಂದಲೇ ಚಾಕು ಇರಿತ

ಅಮೃತಧಾರೆ ಧಾರಾವಾಹಿ ನಟಿಗೆ ಪತಿಯಿಂದಲೇ ಚಾಕು ಇರಿತ

spot_img
- Advertisement -
- Advertisement -

ಬೆಂಗಳೂರು: ಜನಪ್ರಿಯ ಅಮೃತಧಾರೆ ಧಾರವಾಹಿ ನಟಿಗೆ ಪತಿಯೇ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಟಿ ಮಂಜುಳಾ ಅಲಿಯಾಸ್ ಶೃತಿ ಎಂಬವರಿಗೆ ಪತಿ ಅಮರೇಶ್ ಚಾಕುವಿನಿಂದ ಇರಿದಿದ್ದು, ಸದ್ಯ ಗಾಯಗೊಂಡಿರುವ ಶೃತಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜುಲೈ 4 ರಂದು ಘಟನೆ ನಡೆದಿದ್ದು, ಹನುಮಂತನಗರ ಪೊಲೀಸರು ಪತಿ ಅಮರೇಶ್ ರನ್ನು ಬಂಧಿಸಿದ್ದಾರೆ.ಪ್ರೀತಿಸಿ ಮದುವೆಯಾಗಿದ್ದ ಶೃತಿ ಮತ್ತು ಅಮರೇಶ್ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದ ಪರಿಣಾಮ ಕೆಲವು ಸಮಯದಿಂದ ಶೃತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!