Sunday, July 6, 2025
Homeಕರಾವಳಿಮಂಗಳೂರುಬಂಟ್ವಾಳ; ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಬರುವಾಗ ಡಿವೈಡರ್ ಗೆ ಡಿಕ್ಕಿ; ಚಾಲಕ ಸಾವು

ಬಂಟ್ವಾಳ; ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಬರುವಾಗ ಡಿವೈಡರ್ ಗೆ ಡಿಕ್ಕಿ; ಚಾಲಕ ಸಾವು

spot_img
- Advertisement -
- Advertisement -

ಬಂಟ್ವಾಳ; ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಬರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ತುಂಬೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಹರೇಕಳ ಪಾವೂರು ನಿವಾಸಿ ನೌಫಲ್ ಮೃತ ಚಾಲಕ.  ನೌಫಲ್ ಬಿಸಿ ರೋಡಿನಲ್ಲಿ ಸೆಕೆಂಡ್ ಕಾರನ್ನು ಖರೀದಿಸಿದ್ದರು. ಕಾರನ್ನು ಬಿಸಿ ರೋಡಿನಿಂದ ತುಂಬೆ ಮೂಲಕ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ಕೆಳಗಿನ ತುಂಬೆಯಲ್ಲಿ ಕಾರು ಡಿವೈಡರ್ ಮೇಲೆ ಹತ್ತಿ ಬಳಿಕ ಮಂಗಳೂರು ಕಡೆಯಿಂದ ಬರುವ ರಸ್ತೆ ಮೇಲೆ ಬಿದ್ದಿದೆ.

ಆಗ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ಡಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!