ಬೆಳ್ತಂಗಡಿ : ಫೇಸ್ ಬುಕ್ ಅಕೌಂಟ್ ನಲ್ಲಿ ಆಶ್ಲೀಲ ಪದ ಬಳಸಿ ಪೋಸ್ಟ್ ಮಾಡಿದ ಫೇಸ್ ಬುಕ್ ಖಾತೆಯ ವಿರುದ್ಧ ರಿಕ್ಷಾ ಚಾಲಕ ದೂರು ನೀಡಿದ್ದು ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಫೇಸ್ ಬುಕ್ ಅಕೌಂಟ್ ವಿರುದ್ಧ ಜುಲೈ 1 ರಂದು 296 BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ: ಜುಲೈ 1 ರಂದು ರಿಕ್ಷಾ ಚಾಲಕ ವೃತ್ತಿ ಮಾಡುತ್ತಿರುವ ವ್ಯಕ್ತಿಯೊಬ್ಬರು ಧರ್ಮಸ್ಥಳದ ಮಾಹಿತಿ ಕಛೇರಿ ಬಳಿ ರಿಕ್ಷಾ ಪಾರ್ಕ್ ನಲ್ಲಿದ್ದ ಸಮಯ ಸುಮಾರು ಬೆಳಿಗ್ಗೆ 9 ಗಂಟೆಗೆ ರಿಕ್ಷಾ ಚಾಲಕ ಫೇಸ್ ಬುಕ್ ಖಾತೆಯನ್ನು ಓಪನ್ ಮಾಡಿ ನೋಡಿದಾಗ Vijaya Viji ಎಂಬ(https://www.facebook.com/vijaya.viji.73594 ಖಾತೆ ಯಲ್ಲಿ ಅಶ್ಲೀಲ ಪದಗಳನ್ನು ಬಳಸಿ ಸಾರ್ವಜನಿಕವಾಗಿ ಎಲ್ಲರೂ ಬಳಸುವ ಫೇಸ್ ಬುಕ್ ಖಾತೆಗೆ ಅಶ್ಲೀಲ ಪದಗಳನ್ನು ಹಾಕಿರುತ್ತಾರೆ. ಆದ್ದರಿಂದ Vijaya Viji ಎಂಬ ಫೇಸ್ ಬುಕ್ ಖಾತೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ರಿಕ್ಷಾ ಚಾಲಕರೊಬ್ಬರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


