Sunday, June 7, 2026
Homeಕರಾವಳಿಮಂಗಳೂರುಪುತ್ತೂರು; ಉರ್ಲಾಂಡಿ ಸಮೀಪ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ, ಏಳು ಮಂದಿಗೆ ಗಾಯ

ಪುತ್ತೂರು; ಉರ್ಲಾಂಡಿ ಸಮೀಪ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ, ಏಳು ಮಂದಿಗೆ ಗಾಯ

- Advertisement -
- Advertisement -

ಪುತ್ತೂರು; ಉರ್ಲಾಂಡಿ ಸಮೀಪ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಏಳು ಮಂದಿಗೆ ಗಾಯಗಳಾಗಿರುವ ಘಟನೆ ಜೂನ್ 29 ರ ಇಂದು ಭಾನುವಾರ ನಡೆದಿದೆ.

ಸಾಲೆತ್ತೂರು ಮೂಲದ ಮೊಮ್ಮದ್ ತಮೀಮ್ ,ಹಮೀದ್ , ಇಸ್ಮಾಯಿಲ್,ಇಬ್ರಾಹಿಂ , ಸಮೀ‌ರ್ , ಸುಲೈಮಾನ್‌ ಹಾಗೂ ಬೈಕ್ ಸವಾರ ಕೀರ್ತನ್ ಗಾಯಗೊಂದಿದ್ದಾರೆ. ರಿಕ್ಷಾದಲ್ಲಿದ್ದರು ಉರೂಸ್ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದರು ಎನ್ನಲಾಗಿದೆ.

ನಗರದಿಂದ ದರ್ಬೆ ಕಡೆಗೆ ಬೈಕ್ ತೆರಳುತ್ತಿದ್ದ ಸಂದರ್ಭ ಒಳರಸ್ತೆಯಿಂದ ಕಾರು ಏಕಾಏಕಿ ಮುಖ್ಯ ರಸ್ತೆಗೆ ಬಂದಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬಲ ಬದಿಗೆ ಬೈಕ್ ಚಲಾಯಿಸಿದ್ದಾರೆ. ಮುಂಭಾಗದಿಂದ ಬಂದ ರಿಕ್ಷಾಕ್ಕೆ ಗುದ್ದಿದ್ದು, ರಿಕ್ಷಾ ಚಾಲಕ ತಕ್ಷಣ ಬ್ರೇಕ್ ಹಾಕಿದ ಕಾರಣ ತಲೆಕೆಳಗಾಗಿ ಬಿದ್ದಿದೆ. ಗಾಯಾಗಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!