Thursday, June 4, 2026
Homeತಾಜಾ ಸುದ್ದಿಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯ ಐದು ಹುಲಿಗಳ ಕಳೆಬರಹ ಪತ್ತೆ ಪ್ರಕರಣ; ನಾಲ್ವರು...

ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯ ಐದು ಹುಲಿಗಳ ಕಳೆಬರಹ ಪತ್ತೆ ಪ್ರಕರಣ; ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ

- Advertisement -
- Advertisement -

ಚಾಮರಾಜನಗರ; ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯ ಐದು ಹುಲಿಗಳ ಕಳೆಬರಹ ಪತ್ತೆಯಾಗಿದ್ದು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಶಂಕಿತ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಎಲ್ಲಾ ಐದು ಹುಲಿಗಳ ಮರಣೋತ್ತರ ಪರೀಕ್ಷೆ ನಡೆದಿತ್ತು. ನಿನ್ನೆ ತಾಯಿ ಹುಲಿಯ ಮರಣೋತ್ತರ ಪರೀಕ್ಷೆ ನಡೆದಿತ್ತು. ಇಂದು ನಾಲ್ಕು ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಎಪಿಸಿಸಿಎಫ್‌ ನೇತೃತ್ವದಲ್ಲಿ ಪ್ರಾಣಿ ಶಾಸ್ತ್ರಜ್ಞರು, ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆದಿದೆ.

ತಾಯಿ ಹುಲಿಗೆ 8 ವರ್ಷ, ಮರಿ ಹುಲಿಗಳಿಗೆ 10 ತಿಂಗಳು ಆಗಿತ್ತು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತ ಹೊಂದಿದೆ.ನಾಲ್ವರು ಶಂಕಿತ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತೇಕ ಪ್ರತ್ಯೇಕವಾಗಿ ಎಲ್ಲರ ವಿಚಾರಣೆ ನಡೆಯುತ್ತಿದೆ. ಗಾಜನೂರು, ಕೊಪ್ಪ, ಮೀಣ್ಯಂ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!