Saturday, June 6, 2026
Homeಕರಾವಳಿಉಡುಪಿಉಡುಪಿ; ಮಂಜೇಶ್ವರದಲ್ಲಿ ಪೆಟ್ರೋಲ್ ಸುರಿದು ತಾಯಿಯನ್ನು ಕೊಲೆಗೈದ ಆರೋಪಿಯ ಬಂಧನ

ಉಡುಪಿ; ಮಂಜೇಶ್ವರದಲ್ಲಿ ಪೆಟ್ರೋಲ್ ಸುರಿದು ತಾಯಿಯನ್ನು ಕೊಲೆಗೈದ ಆರೋಪಿಯ ಬಂಧನ

- Advertisement -
- Advertisement -

ಉಡುಪಿ; ಮಂಜೇಶ್ವರದ ವರ್ಕಾಡಿಯಲ್ಲಿ ಪೆಟ್ರೋಲ್ ಸುರಿದು ತಾಯಿಯನ್ನು ಕೊಲೆಗೈದ ಆರೋಪಿಯನ್ನು ಬಂಧಿಸಲಾಗಿದೆ.  ಆರೋಪಿ ಮೆಲ್ವಿನ್ ಮೊಂತೆರೊ ನನ್ನು ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಲೊಕೇಷನ್ ಆಧಾರದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದ್ದು, ಆತನನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಆರೋಪಿ ಮೆಲ್ವಿನ್ ಮಲಗಿದ್ದ ತಾಯಿ ಹಿಲ್ಡಾ ಅವರನ್ನು ಕೊಲೆಗೈದು ನಂತರ ಸುಟ್ಟು ಹಾಕಿ ಮನೆ ಸಮೀಪದ ಪೊದೆಗೆ ಎಸೆದಿದ್ದನು. ಮನೆಗೆ ಬಂದಿದ್ದ ನೆರೆಮನೆಯ ಲೋಲಿಟಾ ಅವರನ್ನೂ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿ ಮೆಲ್ವಿನ್ ಹೊಸಂಗಡಿಗೆ ಆಟೋರಿಕ್ಷಾದಲ್ಲಿ ತಪ್ಪಿಸಿಕೊಂಡು ನಂತರ ಮಂಗಳೂರಿಗೆ ಆಗಮಿಸಿದ್ದು, ಅಲ್ಲಿಂದ ಕೊಲ್ಲೂರಿಗೆ ತೆರಳಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!