Sunday, June 7, 2026
Homeಕರಾವಳಿಮಂಗಳೂರುಮಂಗಳೂರು; ತಂದೆಯ ನಿರ್ಲಕ್ಷ್ಯಕ್ಕೆ 10 ತಿಂಗಳ ಮಗು ಬಲಿ: ಅಪ್ಪ ಸೇದಿ ಬಿಸಾಕಿದ ಬೀಡಿ ತುಂಡು...

ಮಂಗಳೂರು; ತಂದೆಯ ನಿರ್ಲಕ್ಷ್ಯಕ್ಕೆ 10 ತಿಂಗಳ ಮಗು ಬಲಿ: ಅಪ್ಪ ಸೇದಿ ಬಿಸಾಕಿದ ಬೀಡಿ ತುಂಡು ನುಂಗಿ ಕಂದಮ್ಮ ಸಾ*ವು

- Advertisement -
- Advertisement -

ಮಂಗಳೂರು; ತಂದೆಯ ನಿರ್ಲಕ್ಷ್ಯಕ್ಕೆ 10 ತಿಂಗಳ ಮಗು ಬಲಿಯಾಗಿರುವ ಘಟನೆ ಅಡ್ಯಾರ್ ನಲ್ಲಿ ನಡೆದಿದೆ. ಅಪ್ಪ ಸೇದಿ ಬಿಸಾಕಿದ ಬೀಡಿ ತುಂಡು ನುಂಗಿ ಕಂದಮ್ಮ ಸಾ*ವನ್ನಪ್ಪಿದೆ. ಅಡ್ಯಾರ್‌ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್‌ ಕುಮಾರ್‌ ಮೃತ ಮಗು.

ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಘಟನೆ ನಡೆದಿದೆ. ಅಸ್ವಸ್ಥಗೊಂಡಿದ್ದ ಮಗುವನ್ನು ಅಪರಾಹ್ನ 3.30ರ ವೇಳೆಗೆ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಭಾನುವಾರ ಬೆಳಗ್ಗೆ 10.25ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.

ತನ್ನ ಪತಿಯ ನಿರ್ಲಕ್ಷ್ಯದಿಂದಲೇ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡು ಮಗು ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಎಸೆಯದಂತೆ ಗಂಡನಿಗೆ ಹಲವು ಬಾರಿ ತಿಳಿಸಿದ್ದರೂ ನಿರ್ಲಕ್ಷಿಸಿದ ಪರಿಣಾಮ ಮಗುವಿನ ಪ್ರಾಣ ಹೋಗಿದೆ’ ಎಂದು ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -

Latest News

error: Content is protected !!