Saturday, June 6, 2026
Homeಕರಾವಳಿಮಂಗಳೂರುಕಡಬ ; ಪಂಪ್‌ಗೆ ಸ್ವಿಚ್ ಹಾಕುವಾಗ  ವಿದ್ಯುತ್ ಶಾಕ್ ತಗುಲಿ ಮಹಿಳೆ ಸಾವು

ಕಡಬ ; ಪಂಪ್‌ಗೆ ಸ್ವಿಚ್ ಹಾಕುವಾಗ  ವಿದ್ಯುತ್ ಶಾಕ್ ತಗುಲಿ ಮಹಿಳೆ ಸಾವು

- Advertisement -
- Advertisement -

ಕಡಬ ; ಪಂಪ್‌ಗೆ ಸ್ವಿಚ್ ಹಾಕುವಾಗ  ವಿದ್ಯುತ್ ಶಾಕ್ ತಗುಲಿ ಮಹಿಳೆ ಸಾವನ್ನಪ್ಪಿರುವ ಘಟನೆ  ಎಡಮಂಗಲ ಸಮೀಪದ ಚಾರ್ವಾಕ ಗ್ರಾಮದಲ್ಲಿ ಜೂನ್ 16ರ ಸಂಜೆ ನಡೆದಿದೆ.

ದೋಳ್ಪಾಡಿ ನಿವಾಸಿ ಪುರಂದರ ಎಂಬವರ ಪತ್ನಿ ರೇಖಾ(35) ಮೃತಟ್ಟವರು.  ರೇಖಾ ತಮ್ಮ ಮನೆಯಲ್ಲಿ ನೀರಿನ ಪಂಪ್ ಆನ್ ಆಗ್ತಿಲ್ಲ ಎಂದು  ಕೇಬಲ್ ಮುಟ್ಟಿದ್ದಾರೆ. ಆಗ ವಿದ್ಯುತ್ ಶಾಕ್ ಹೊಡೆದು ಬಿದ್ದಿದ್ದಾರೆ ಎನ್ನಲಾಗಿದೆ. 

ತಕ್ಷಣ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರಿಕ್ಷೇಗಾಗಿ  ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದ್ದು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!