Thursday, June 4, 2026
Homeಕರಾವಳಿಉಡುಪಿಇ-ಮೇಲ್ ಮೂಲಕ ಖಾಸಗಿ ಶಾಲೆಗೆ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸರಿಂದ ಶಾಲೆಯ ಪರಿಶೀಲನೆ

ಇ-ಮೇಲ್ ಮೂಲಕ ಖಾಸಗಿ ಶಾಲೆಗೆ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸರಿಂದ ಶಾಲೆಯ ಪರಿಶೀಲನೆ

- Advertisement -
- Advertisement -

ಉಡುಪಿ: ಇ-ಮೇಲ್ ಮೂಲಕ ನಗರದ ಖಾಸಗಿ ಶಾಲೆಯೊಂದಕ್ಕೆ ಜೂನ್‌ 16 ಸೋಮವಾರದಂದು ಬಾಂಬ್ ಸ್ಪೋಟದ ಬೆದರಿಕೆ ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್ ಸ್ಪೋಟದ ಬೆದರಿಕೆಯ ಹಿನ್ನೆಲೆಯಲ್ಲಿ ನಗರದ ಖಾಸಗಿ ಶಾಲೆಗೆ ಶ್ವಾನದಳ, ವಿಧ್ವಂಸಕ ನಿಗ್ರಹ ತಂಡ(Anti Sabotage Team) ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಆಗಮಿಸಿದ ಪೊಲೀಸರು ಶಾಲಾ ಆವರಣದಲ್ಲಿ ತೀವ್ರ ತಪಾಸಣೆ ನಡೆಸಿದರು. ಸದ್ಯ ಯಾವುದೇ ಬಾಂಬ್ ಅಥವಾ ಅಪಾಯಕಾರಿ ಅಂಶ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಇದೊಂದು ಹುಸಿ ಇ ಮೇಲ್ ಬೆದರಿಕೆ ಕರೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಶಾಲೆಯನ್ನು ಪರಿಶೀಲಿಸಿದ ಪೊಲೀಸರು ಆಡಳಿತ ಮಂಡಳಿಗೆ ಶಾಲೆಯನ್ನು ಬಿಟ್ಟುಕೊಟ್ಟಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!