Friday, June 5, 2026
Homeಕರಾವಳಿಮಂಗಳೂರುಬಂಟ್ವಾಳ: ಜೀಪ್ ಚಲಾಯಿಸುತ್ತಿದ್ದಾಗ  ಬೈಕ್ ನಲ್ಲಿ ಬಂದು ತಲವಾರ್ ದಾಳಿಗೆ ಯತ್ನ ಆರೋಪ

ಬಂಟ್ವಾಳ: ಜೀಪ್ ಚಲಾಯಿಸುತ್ತಿದ್ದಾಗ  ಬೈಕ್ ನಲ್ಲಿ ಬಂದು ತಲವಾರ್ ದಾಳಿಗೆ ಯತ್ನ ಆರೋಪ

- Advertisement -
- Advertisement -

ಬಂಟ್ವಾಳ: ಜೀಪ್ ಚಲಾಯಿಸುತ್ತಿದ್ದಾಗ  ಬೈಕ್ ನಲ್ಲಿ ಬಂದು ತಲವಾರ್ ದಾಳಿಗೆ ಯತ್ನಿಸಿರುವ ಆರೋಪ ಆರೋಪ ಕೇಳಿ ಬಂದಿದೆ.  

ಸಜೀಪ ಮುನ್ನೂರು ಗ್ರಾಮದ ಉಮರ್ ಫಾರೂಕ್ (48) ಎಂಬವರು 11.06.2025 ರಂದು ಮುಂಜಾನೆ, ಮನೆಯಿಂದ ಜೀಪ್ ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಿರುವ ವೇಳೆ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದ ವೇಳೆ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದಿದ್ದು,  ಈ ವೇಳೆ ಬೈಕ್ ನಲ್ಲಿಹಿಂಬದಿ ಸವಾರನಾಗಿ ಕುಳಿತಿದ್ದ ವ್ಯಕ್ತಿಯು ತಲವಾರು ಬೀಸಿರುತ್ತಾನೆ. ಈ ವೇಳೆ ತಲವಾರು ತಾಗಿ ಫಾರೂಕ್ ಅವರ ವಾಹನದ ಸೈಡ್ ಮಿರರ್ ಗಾಜು ಒಡೆದಿದೆ ಎನ್ನಲಾಗಿದೆ. ಘಟನೆಯ ಬಗ್ಗೆ ಫಾರೂಕ್ ದಿನಾಂಕ; 13.06.2025 ರಂದು  ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!