Saturday, June 6, 2026
Homeಕರಾವಳಿಮಂಗಳೂರುಸುಳ್ಯ; ಪಂಜದ ವೈದ್ಯನಿಂದ ಮೈಸೂರಿನ ಯುವತಿಗೆ ಮದುವೆಯಾಗೋದಾಗಿ ಹೇಳಿ ವಂಚನೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

ಸುಳ್ಯ; ಪಂಜದ ವೈದ್ಯನಿಂದ ಮೈಸೂರಿನ ಯುವತಿಗೆ ಮದುವೆಯಾಗೋದಾಗಿ ಹೇಳಿ ವಂಚನೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

- Advertisement -
- Advertisement -

ಸುಳ್ಯ; ಪಂಜದ ವೈದ್ಯರೊಬ್ಬರು ಮೈಸೂರಿನ ಯುವತಿಗೆ ಮದುವೆಯಾಗೋದಾಗಿ ಹೇಳಿ ವಂಚಿಸಿದ್ದಾರೆ ಎಂದು ಯುವತಿ  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪಂಜ ಮೂಲದ ಡಾ.ಆದರ್ಶ್‌ ಅವರಿಗೆ ಫೇಸ್ಬುಕ್‌ ಮೂಲಕ ಯುವತಿಯ ಪರಿಚಯವಾಗಿದೆ. ಬಳಿಕ ವಿವಾಹದ ಭರವಸೆ ನೀಡಿ ಆದರ್ಶ್ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ, ರಿಜಿಸ್ಟರ್ಡ್‌ ವಿವಾಹವಾಗಿದ್ದರಾಂತೆ. ಆದರೆ ಇದೀಗ ಇದಕ್ಕೆ ತಮ್ಮ ತಂದೆ ತಾಯಿಯ ವಿರೋಧವಿದೆ ಎನ್ನುವ ಕಾರಣವನ್ನು ನೀಡಿ ನನ್ನನ್ನು ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸಿ ವಂಚನೆ ಮಾಡುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಡಾ.ಆದರ್ಶ್‌, ಇವರ ತಂದೆ ವೆಂಕಟರಮಣ ಭಟ್‌, ತಾಯಿ ಶಶಿಕಲಾ, ಸಹೋದರರಾದ ಆದಿತ್ಯ ಭಟ್‌, ರಜಿತ್‌ ಭಟ್‌ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಮೊದಲಿಗೆ ಈ ಪ್ರಕರಣ ಮೈಸೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ನಂತರ ಹೆಚ್ಚಿನ ತನಿಖೆಗಾಗಿ ಸುಬ್ರಹ್ಮಣ್ಯ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಹೈಕೋರ್ಟ್‌ ಆದೇಶದ ಮೇರೆಗೆ ಈ ಪ್ರಕರಣವನ್ನು ಮೈಸೂರು ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಈ ನಡುವೆ ಡಾ.ಆದರ್ಶ್‌ ಹಾಗೂ ಅವರ ಕುಟುಂಬ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಕಾನೂನಾತ್ಮಕ ಪರಿಹಾರ ದೊರೆತಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!