Tuesday, June 9, 2026
Homeಉತ್ತರ ಕನ್ನಡಆರ್ ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ; ಮಂಗಳೂರಿನ ಯುವತಿ ಸಿಎ ಅಕ್ಷತಾ ಪೈ ಸಾವು

ಆರ್ ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ; ಮಂಗಳೂರಿನ ಯುವತಿ ಸಿಎ ಅಕ್ಷತಾ ಪೈ ಸಾವು

- Advertisement -
- Advertisement -

ಬೆಂಗಳೂರು; ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಮಂಗಳೂರಿನ ಯುವತಿ ಸಿಎಂ ಅಕ್ಷತಾ ಪೈ ಸಾವನ್ನಪ್ಪಿದ್ದಾರೆ.

ಮಂಗಳೂರಿನ ಅಕ್ಷತಾ ಪೈ (26) ಉತ್ತರಕನ್ನಡದ  ಆಶಯ್ ಎಂಬವರನ್ನು ಇಬ್ಬರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ವಿವಾಹದ ನಂತರ ಇಬ್ಬರು ಬೆಂಗಳೂರಿಗೆ ಬಂದು, ನಗರದ ಕಮ್ಮನಹಳ್ಳಿಯಲ್ಲಿ ವಾಸವಿದ್ದರು. ಪತಿ ಆಶಯ್ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ರೆ, ಮೃತ ಅಕ್ಷತಾ ಅವರು ಸಿಎ ಆಗಿ ಕೆಲಸ ಮಾಡುತ್ತಿದ್ದರು.

ಆರ್​ಸಿಬಿಯ ವಿಜಯೋತ್ಸವವನ್ನು ನೋಡುವುದಕ್ಕಾಗಿ ಗಂಡನ ಜೊತೆ ಅಕ್ಷತಾ ಪೈ ಅವರು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು. ಈ ವೇಳೆ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಗಂಡನ ಎದುರಲ್ಲೇ ಅಕ್ಷತಾ ಸಾವನ್ನಪ್ಪಿದ್ದಾರೆ.

ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಷತಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ  ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಸಿದ್ದಾಪುರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

- Advertisement -

Latest News

error: Content is protected !!