Saturday, June 13, 2026
Homeಕರಾವಳಿಮಂಗಳೂರುಬಂಟ್ವಾಳ: ಹಾವು ಕಚ್ಚಿ ನವವಿವಾಹಿತ ಸಾವು

ಬಂಟ್ವಾಳ: ಹಾವು ಕಚ್ಚಿ ನವವಿವಾಹಿತ ಸಾವು

- Advertisement -
- Advertisement -

ಬಂಟ್ವಾಳ: ಹಾವು ಕಚ್ಚಿ ನವವಿವಾಹಿತ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ನಡೆದಿದೆ. ದಿವಂಗತ ಇಸ್ಮಾಯಿಲ್‌ ಎಂಬುವವರ ಪುತ್ರ ಅಶ್ರಫ್‌ (28) ಮೃತಪಟ್ಟ ಯುವಕ.

ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಪಾಂಡವರಕಲ್ಲಿನ ಮನೆಯೊಂದರಲ್ಲಿ ಮಧ್ಯಾಹ್ನದ ಸಮಯ ಅಡಿಕೆ ಸುಲಿಯುತ್ತಿದ್ದಾಗ  ಕಾಲಿನ ಬೆರಳಿಗೆ ಹಾವು ಕಚ್ಚಿತ್ತು ಎನ್ನಲಾಗಿದೆ. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಇವರಿಗೆ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎನ್ನಲಾಗಿದೆ.

- Advertisement -

Latest News

error: Content is protected !!