Wednesday, June 24, 2026
Homeತಾಜಾ ಸುದ್ದಿಆರ್‌ಸಿಬಿ ಗೆಲುವಿನ ಸೆಲೆಬ್ರೇಷನ್ ವೇಳೆ ಅಪಘಾತವಾಗಿ ಯುವಕ ಸಾವು

ಆರ್‌ಸಿಬಿ ಗೆಲುವಿನ ಸೆಲೆಬ್ರೇಷನ್ ವೇಳೆ ಅಪಘಾತವಾಗಿ ಯುವಕ ಸಾವು

- Advertisement -
- Advertisement -

ಶಿವಮೊಗ್ಗ;  ಆರ್‌ಸಿಬಿ ಗೆಲುವಿನ ಸೆಲೆಬ್ರೇಷನ್ ವೇಳೆ ಅಪಘಾತವಾಗಿ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ನಗರದ ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಸಮೀಪದ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಮಂಗಳವಾರ ರಾತ್ರಿ ನಡೆದಿದೆ.

ವೆಂಕಟೇಶ ನಗರದ ನಿವಾಸಿ ಅಭಿ (21) ಸಾವನ್ನಪ್ಪಿದ ಯುವಕ. ಆರ್‌ಸಿಬಿ ಗೆಲುವಿನ ಹಿನ್ನೆಲೆ ಯುವಕರು ಬೈಕ್‌ ಜಾಥಾ ನಡೆಸಿದ್ದರು. ಈ ಸಂದರ್ಭ ಎರಡು ಬೈಕುಗಳು ಮುಖಾಮುಖಿ ಢಿಕ್ಕಿಯಾಗಿವೆ. ತೀವ್ರ ಗಾಯಗೊಂಡಿದ್ದ ಅಭಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತವಾಗುತ್ತಿದ್ದಂತೆ ಯುವಕರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ಆದರೆ ಆ ವೇಳೆಗಾಗಲೇ ಅಭಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!