Thursday, June 4, 2026
Homeಕರಾವಳಿಮಂಗಳೂರುವೇಣೂರು: ಕುಣಿತ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮ

ವೇಣೂರು: ಕುಣಿತ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ವೇಣೂರು: ಶ್ರೀ‌ ಕ್ಷೇತ್ರ ಧರ್ಮಸ್ಥಳ ‌ಗ್ರಾಮಾಭಿವ್ರದ್ದಿ ಯೋಜನೆ (ರಿ) ಗುರುವಾಯನಕೆರೆ, ಶ್ರೀ‌ ಮಂಜುನಾಥೇಶ್ವರ ಭಜನಾ ಪರಿಷತ್ ‌ಧರ್ಮಸ್ಥಳ, ಧೀಮಹಿ ಸನಾತನ ಪ್ರತಿಷ್ಠಾನ ಮಹಾವೀರ ನಗರ‌ ವೇಣೂರು ಇದರ ಸಹಯೋಗದಲ್ಲಿ ನಡೆದ ವೇಣೂರು ವಲಯದ ಕುಣಿತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಈ ಉದ್ಘಾಟನೆಯನ್ನು ಶ್ರೀಮತಿ ಗೌರಮ್ಮ ಇವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಜ್ಞ ನಾರಾಯಣ ಭಟ್ ಇವರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಸ್ಕರ್ ಪೈ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ನಿರ್ದೇಶಕರು, ಎಸ್ ಕೆ ಡಿ ಆರ್ ಡಿ ಪಿ ಯೋಜನಾಧಿಕಾರಿ ಅಶೋಕ್ ಬಿ , ಸಂದೇಶ್ ಮದ್ದಡ್ಕ ಕುಣಿತ ಭಜನಾ ತರಬೇತಿ ಅಧ್ಯಕ್ಷರು ಉಪಸ್ಥಿತರಿದ್ದರು. ಹಾಗೆಯೇ ಸುಧೀರ್ ಭಂಡಾರಿ, ಸಂಭಾಷಿನಿ, ಯೋಗೀಶ್, ಬಿಕ್ರೊಟ್ಟು, ರೋಹಿಣಿ ಪ್ರಕಾಶ್, ಪ್ರಶಾಂತ್ ಪಡಿವಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ತರಬೇತುದಾರರಾಗಿ ಗಗನ್ ಹಾಗು ಅಖಿಲೇಶ್ ಹಾಗೂ ಸೇವಾ ಪ್ರತಿನಿಧಿ ಜಯಂತಿ ವೇಣೂರು ಹಾಗೂ ಜಲಜ ಮೂಡುಕೋಡಿ ಇವರು ಉಪಸ್ಥಿತರಿದ್ದರು . ಕಾರ್ಯಕ್ರಮದ ಸ್ವಾಗತ ಹಾಗೂ ಧನ್ಯವಾದವನ್ನು ಸಂತೋಷ್ ಅಲಿಯೂರು ಇವರು ನೆರವೇರಿಸಿದರು.

- Advertisement -

Latest News

error: Content is protected !!