Thursday, June 4, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು 3,649 ಮಂದಿಗೆ ಕೊರೊನಾ ಸೋಂಕು, 61 ಮಂದಿ ಸಾವು, ಬೆಂಗಳೂರಿನಲ್ಲೇ 1714 ಪ್ರಕರಣಗಳು ಪತ್ತೆ..

ರಾಜ್ಯದಲ್ಲಿಂದು 3,649 ಮಂದಿಗೆ ಕೊರೊನಾ ಸೋಂಕು, 61 ಮಂದಿ ಸಾವು, ಬೆಂಗಳೂರಿನಲ್ಲೇ 1714 ಪ್ರಕರಣಗಳು ಪತ್ತೆ..

- Advertisement -
- Advertisement -

ಬೆಂಗಳೂರು : ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಕೊರೊನಾ ವೈರಸ್ ಸದ್ಯಕ್ಕಂತೂ ಬಿಟ್ಟು ಹೋಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಯಾವ ಸೂಚನೆಯೂ ಸಿಗುತ್ತಿಲ್ಲ. ಇನ್ನು ಇಂದು ರಾಜ್ಯದಲ್ಲಿ ಒಂದೇ 3,649 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 71,069ಕ್ಕೆ ಏರಿಕೆಯಾಗಿದೆ.

ಇಂದು 61 ಮಂದಿಯನ್ನು ಕೊರೊನಾ ರಾಜ್ಯದಲ್ಲಿ ಬಲಿ ಪಡೆದಿದೆ.ಇನ್ನು ರಾಜ್ಯದ ಬೇರೆ ಬೇರೆ ಕೋವಿಡ್ ಆಸ್ಪತ್ರೆಗಳಿಂದ 1664 ಮಂದಿ ಇವತ್ತು ಗುಣಣುಖವಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಉದ್ಯಾನನಗರಿ ಬೆಂಗಳೂರಿನಲ್ಲಿ ಇವತ್ತು 1714 ಹೊಸ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 26,746ಕ್ಕೆ ಏರಿಕೆಯಾಗಿದೆ. ಅಲ್ಲದೇ 22 ಮಂದಿ ನಗರದಲ್ಲಿ ಇವತ್ತು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!