- Advertisement -
![]()
- Advertisement -
ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿ ನೌಷದ್ @ ಚೊಟ್ಟೆ ನೌಷದ್ ಮೇಲೆ ಮಂಗಳೂರು ಸಬ್ ಜೈಲಿನಲ್ಲಿ ಮೇ.19 ರಂದು ಅಟ್ಯಾಕ್ ಮಾಡಲಾಗಿದೆ. ಸದ್ಯ ನೌಷಾದ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನೌಷದ್ @ ಚೊಟ್ಟೆ ನೌಷದ್ ಪೊಲೀಸ್ ಕಸ್ಟಡಿ ಮೇ.19 ರಂದು ಅಂತ್ಯವಾದ ಹಿನ್ನಲೆಯಲ್ಲಿ ಪೊಲೀಸರು ಮಂಗಳೂರು ಕೋರ್ಟ್ ಗೆ ಕರೆತಂದು ಬಳಿಕ ಮೈಸೂರು ಜೈಲಿಗೆ ಶಿಫ್ಟ್ ಮಾಡೋದಕ್ಕೆ ಮುಂದಾಗಿದ್ದರು. ಈ ವೇಳೆ ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದು ಜೈಲಿನಲ್ಲಿ ಮತ್ತೊಬ್ಬ ಕೈದಿಯನ್ನು ಭೇಟಿಗಾಗಿ ಜೈಲಿಗೆ ಪೊಲೀಸರು ಕರೆದುಕೊಂಡು ಹೋದಾಗ ಏಕಾಏಕಿ ಜೈಲಿನಲ್ಲಿದ್ದ ಇತರ ಕೈದಿಗಳು ಕಲ್ಲು ಹಾಗೂ ಇತರ ಸಿಕ್ಕ ಸಿಕ್ಕ ವಸ್ತುಗಳಿಂದ ನೌಷಾದ್ ಮೇಲೆ ತೂರಿದ್ದಾರೆ. ಸದ್ಯ ನೌಷಾದ್ ಗೆ ಯಾವುದೇ ಗಂಭೀರ ಗಾಯವಾಗದೆ ಪಾರಾಗಿದ್ದಾನೆ.
- Advertisement -


