Saturday, June 13, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಧರ್ಮಸ್ಥಳದ ಯುವತಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು

ಬೆಳ್ತಂಗಡಿ : ಧರ್ಮಸ್ಥಳದ ಯುವತಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢ ಸಾವು

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳದ ಗ್ರಾಮದ ಬೊಳಿಯಾರ್ ನಿವಾಸಿ, ಪ್ರಸ್ತುತ ಬೆಳ್ತಂಗಡಿಯ ಲಾಯಿಲ ಗ್ರಾಮದ ಕಾಶಿಬೆಟ್ಟು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ಎಸ್ ನಾಯರ್ (22) ನಿಗೂಢವಾಗಿ ಸಾವನ್ನಪ್ಪಿದ ಘಟನೆ ಪಂಜಾಬ್ ನಲ್ಲಿ ಮೇ. 17 ರಂದು ಸಂಜೆ ನಡೆದಿದೆ.

ಪಂಜಾಬಿನ ಎಲ್.ಪಿ.ಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ಕಳೆದ ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗದಲ್ಲಿದ್ದರು. ಜಪಾನ್ ಗೆ ಉದ್ಯೋಗಕ್ಕೆ ಹೋಗುವವರಿದ್ದು ಪಂಜಾಬ್ ಎಲ್.ಪಿ.ಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ತೆರಳಿದ್ದರು. ಈ ಬಗ್ಗೆ ಮನೆಯವರಿಗೆ ಕರೆ ಮಾಡಿ ಹೇಳಿದ್ದಳು ಎಂದು ತಿಳಿದು ಬಂದಿದೆ.

ಪಂಜಾಬ್ ನ ಜಲಂದರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬದವರು ಪಂಜಾಬ್ ಗೆ ಮೇ 17 ರಂದು ರಾತ್ರಿಯೇ ತೆರಳಿದ್ದು. ಪ್ರಾಥಮಿಕ ಮಾಹಿತಿ ಪ್ರಕಾರ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆಬಿದ್ದು ಸಾವನ್ನಪ್ಪಿರುವುದಾಗಿ ಪಂಜಾಬ್‌ ಪೊಲೀಸರಿಂದ ಪೋಷಕರಿಗೆ ಕರೆ ಮಾಡಿ ತಿಳಿದಿದ್ದಾರೆ. ಆದ್ರೆ ಮಗಳನ್ನು ಕೊಲೆ ಮಾಡಲಾಗಿದೆ ಅಂತ ತಂದೆ ಆರೋಪ ಮಾಡುತ್ತಿದ್ದಾರೆ.

ಘಟನೆಯ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

- Advertisement -

Latest News

error: Content is protected !!