Monday, June 8, 2026
Homeತಾಜಾ ಸುದ್ದಿಬಾಗಲಕೋಟೆ: ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಸಾವು

ಬಾಗಲಕೋಟೆ: ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಸಾವು

- Advertisement -
- Advertisement -

ಬಾಗಲಕೋಟೆ: ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ‌ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ನಡೆದಿದೆ.

ಕುಂಬಾರಹಳ್ಳ ಗ್ರಾಮದ ನಿವಾಸಿ ಪ್ರವೀಣ ಕುರ್ನೆ ಎಂಬಾತನೇ ಮೃತ ದುರ್ದೈವಿ. ಕಲ್ಯಾಣಮಂಟಪದಲ್ಲಿ ಪ್ರವೀಣ ಕುರ್ನೆ ಹಾಗೂ ಯುವತಿಯ ಮದುವೆ ಸಮಾರಂಭ ನಡೆಯುತ್ತಿತ್ತು. ಆದರೆ, ಕೆಲವೇ ಕ್ಷಣದಲ್ಲಿ ಅಲ್ಲಿ ಸೂತಕದ ಛಾಯೆ ಆವರಿಸಿದೆ. ಪ್ರವೀಣ ಕುರ್ನೆ ರಾಜ್ಯ ಸೈಕ್ಲಿಂಗ್ ಸಂಘದ ಕಾರ್ಯದರ್ಶಿ ಶ್ರೀಶೈಲ ಕುರ್ನೆ ಪುತ್ರ ಎಂದು ತಿಳಿಯಲಾಗಿದೆ.

- Advertisement -

Latest News

error: Content is protected !!