Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಮು ಪ್ರಚೋದನಕಾರಿ ಪೋಸ್ಟ್ ಗಳಿಗೆ ಲೈಕ್ ಮಾಡಿದವರ...

ಮಂಗಳೂರು; ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಮು ಪ್ರಚೋದನಕಾರಿ ಪೋಸ್ಟ್ ಗಳಿಗೆ ಲೈಕ್ ಮಾಡಿದವರ ವಿರುದ್ಧ ಎಫ್ ಐಆರ್

- Advertisement -
- Advertisement -

ಮಂಗಳೂರು; ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವಹೇಳನಕಾರಿ ಪೋಸ್ಟ್ ಗಳಿಗೆ ಲೈಕ್ ಮಾಡಿದವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

_dj_bharath_2008 ಎಂಬ ಇನ್ಸ್‌ಟಾಗ್ರಾಂ ಖಾತೆಯಲ್ಲಿ ” ಸುಹಾಸ್‌ ಅಣ್ಣನ ಕೊಂದವರು ಹಾಗೂ ಕೊಂದವರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು. ಆಗ ಮಾತ್ರ ಸುಹಾಸ್‌ ಅಣ್ಣನ ಆತ್ಮಕ್ಕೆ ಶಾಂತಿಸಿಗುತ್ತೆ ನೆನಪಿಟ್ಟುಕೊಳ್ಳಿʼ ಎಂದು ಪೋಸ್ಟ್‌ ಮಾಡಲಾಗಿತ್ತು. ಅದಕ್ಕೆ ಲೈಕ್‌ ನೀಡಿದ ಬಿಜೈಯ ಶರಣಪ್ಪ ಬಸವರಾಜ ಎಂಬಾತನ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

karaavali_official ಎಂಬ ಇನ್ಸ್‌ಟಾಗ್ರಾಂ ಖಾತೆಯಲ್ಲಿ ʼಪ್ರತಿರೋಧ ಅಪರಾಧವಲ್ಲ. ಮುಸ್ಲಿಮರು ನಪುಂಸಕರು ಅಲ್ಲ ನೆನಪಿರಲಿ. ತಾನು ಯಾವ ಕಾರಣಕ್ಕೆ ಕೊಲೆಯಾದೆ ಅನ್ನೊ ಅರಿವಿಲ್ಲದೆ ಖಬುರ್ಸ್ತಾನಲ್ಲಿ ಮಲಗಿರೋ ಅಮಾಯಕ ಪಾಝಿಲ್ ನ ಕೊಲೆ ಮಾಡಿದ ಇವನ ಸಾವನ್ನು ದುಃಖ ಪಡುವಷ್ಟು ಮೂರ್ಖ ನಾನಲ್ಲ…Targe 6 Peace baki inshallah’ ಎಂದು ಮಾಡಿದ ಪೋಸ್ಟ್  ಲೈಕ್‌ ಮಾಡಿದ ಬಜ್ಪೆಯ ಶಹನಾಝ್‌ ಎಂಬಾಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!