Wednesday, June 3, 2026
Homeಆರಾಧನಾಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ 2 ರಿಂದ ಮೇ 04ರವರೆಗೆ ಅತಿಮಹಾರುದ್ರಯಾಗ

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ 2 ರಿಂದ ಮೇ 04ರವರೆಗೆ ಅತಿಮಹಾರುದ್ರಯಾಗ

- Advertisement -
- Advertisement -

ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಶ್ರೀಮದ್ ಕಾಶಿಜ್ಞಾನ ಸಿಂಹಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಾಶಿ ಪೀಠ ವಾರಣಾಸಿ ಇವರ ದಿವ್ಯ ಸಾನಿಧ್ಯವಾಗಿ ಹಾಗೂ ಬ್ರಹ್ಮಶ್ರೀ ನಿಲಢಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಮೇ 02, 2025ನೇ ಶುಕ್ರವಾರದಿಂದ ಮೇ 04, 2025ನೇ ಆದಿತ್ಯವಾರದ ವರೆಗೆ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಅತಿಮಹಾರುದ್ರಯಾಗ ನಡೆಯಲಿದೆ.

ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ, ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು, ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ವಿದ್ವಾನ್ ಗಣಪತಿ ಭಟ್ ತಿರುಪಳ್ಳಿ ಅವರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ದಿನಾಂಕ. 02 ಮೇ 2025ನೇ ಶುಕ್ರವಾರದಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಹವನ, ನಿಟಿಲಾಕ್ಷ ದೇವರಿಗೆ ಶತರುದ್ರಾಭಿಷೇಕ, ಕಲಶ ಪ್ರತಿಷ್ಠೆ, ಪರಿವಾರ ದೇವತೆಗಳಿಗೆ ಕಲಶ ಪ್ರತಿಷ್ಠೆ, ಶತರುದ್ರ ಪಾರಾಯಣ, ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12.30 ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6 ರಿಂದ ದೇವತಾ ಪ್ರಾರ್ಥನೆ, ಯಾಗ ಮಂಟಪದಲ್ಲಿ ತೋರಣ ಮುಹೂರ್ತ, ವಾಸ್ತು ರಕ್ಷೋಘ್ನ ಹೋಮ, ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ರಂಗ ಪೂಜೆ ಮತ್ತು ರಾತ್ರಿ ಗಂಟೆ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರ ಅಭಿನಯದಲ್ಲಿ ‘ಕಲ್ಜಿಗದ ಮಾಯಾರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಭಕ್ತಿ ಪ್ರದಾನ ನಡೆಯಲಿದೆ.

ದಿ. 03 ಮೇ 2025ನೇ ಶನಿವಾರದಂದು ಬೆಳಿಗ್ಗೆ 8 ರಿಂದ ಪುಣ್ಯಾಹ ನಾಂದಿ, ಮಹಾಸಂಕಲ್ಪ, ಅರಣಿಮಥನ, ಅಗ್ನಿಜನನ, ಬ್ರಹ್ಮಕೂರ್ಚ ಹೋಮ, ಮಹಾಗಣಪತಿ ಹೋಮ, ಪವಮಾನ ಪ್ರಯಾಶ್ಚಿತ ಹೋಮ, ಮಂಚದುರ್ಗ ಹೋಮ, ಮಂಟಪ ಸಂಸ್ಕಾರ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ, ಸಂಜೆ ಗಂಟೆ 4ಕ್ಕೆ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆಯ ಶೋಭಾಯಾತ್ರೆ ಮತ್ತು ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಆಗಮನ. ಲಿಂಗತೋಭದ್ರ ಮಂಡಲ ಪೂಜೆ, ಕಲಶ ಪ್ರತಿಷ್ಠೆ, ಶತರುದ್ರ ಪಾರಾಯಣ. ಅಷ್ಟಾವಧಾನ ನಡೆಯಲಿದೆ. ಬೆಳಿಗ್ಗೆ6 ರಿಂದ ಸಂಜೆ 6.00 ತನಕ ವಿವಿಧ ತಂಡದಿಂದ ಭಜನೆ ಕಾರ್ಯಕ್ರಮ ನೆರವೇರಲಿದೆ. ರಾತ್ರಿ ಗಂಟೆ 8.00ಕ್ಕೆ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.

ದಿ. ಮೇ 04 2025ನೇ ಆದಿತ್ಯವಾರದಂದು ಬೆಳಿಗ್ಗೆ ಗಂಟೆ 5ರಿಂದ ಅತಿಮಹಾರುದ್ರಯಾಗ ಪ್ರಾರಂಭ. ಬೆಳಿಗ್ಗೆ ಗಂಟೆ 11ಕ್ಕೆ ಪೂರ್ಣಾಹುತಿ, ಮಹಾಪೂಜೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ, ಮಧ್ಯಾಹ್ನ 12.30ಕ್ಕೆ ಮಹಾಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ ಗಂಟೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

- Advertisement -

Latest News

error: Content is protected !!