Saturday, June 6, 2026
Homeಕರಾವಳಿಮಂಗಳೂರುಸುಳ್ಯ; ಕೊಯನಾಡಿನಲ್ಲಿ ಹೊಳೆಗೆ ಬಿದ್ದು ಮಹಿಳೆ ಸಾವು

ಸುಳ್ಯ; ಕೊಯನಾಡಿನಲ್ಲಿ ಹೊಳೆಗೆ ಬಿದ್ದು ಮಹಿಳೆ ಸಾವು

- Advertisement -
- Advertisement -

ಸುಳ್ಯ; ಹೊಳೆಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ನಡೆದಿದೆ.

ದಿ. ಅಣ್ಣು ದಾಸ್ ಅವರ ಪತ್ನಿ ಯಶೋದ ದಾಸ್ (60) ಮೃತ ಮಹಿಳೆ. ಕೆಲವು ವರ್ಷಗಳಿಂದ ಅವರಿಗೆ ಪಾರ್ಶ್ವವಾಯು ಹಾಗೂ ಹೃದಯ ಸಂಬಂಧಿತ ಕಾಯಿಲೆ ಇದ್ದು, ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಆಪರೇಶನ್ ಆಗಿ ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು.

ಅವರ ಮಗ ಉಮೇಶ್ ಅವರು ಪೇಟೆಗೆ ಹೋಗಿ ವಾಪಸು ಬಂದಾಗ ಯಶೋದಾ ಅವರು ಮನೆಯಲ್ಲಿ ಇರಲಿಲ್ಲ. ಕೂಡಲೇ ಅಕ್ಕ ಪಕ್ಕದವರ ಮನೆಯವರಿಗೆ ವಿಷಯವನ್ನು ತಿಳಿಸಿದ್ದು, ಹುಡುಕಾಡಿದಾಗ ಮನೆಯ ಪಕ್ಕದ ಹೊಳೆಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸಂಪಾಜೆ ಪೋಲಿಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.



- Advertisement -

Latest News

error: Content is protected !!