Thursday, June 4, 2026
Homeತಾಜಾ ಸುದ್ದಿಬೆಂಗಳೂರಿನ ವಲಯ ಉಸ್ತುವಾರಿ ಸಚಿವರ ಸಭೆಗೆ ನಡೆದುಕೊಂಡೇ ಬಂದ ಸಚಿವ ಸುರೇಶ್ ಕುಮಾರ್

ಬೆಂಗಳೂರಿನ ವಲಯ ಉಸ್ತುವಾರಿ ಸಚಿವರ ಸಭೆಗೆ ನಡೆದುಕೊಂಡೇ ಬಂದ ಸಚಿವ ಸುರೇಶ್ ಕುಮಾರ್

- Advertisement -
- Advertisement -

ಬೆಂಗಳೂರು : ಸರಳ ಮಾತುಗಳಂತೆ ಬದುಕಿ ತೋರಿಸುತ್ತಿರುವವರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು. ಜನರ ಸಮಸ್ಯೆಗೆ ಥಟ್ ಅಂತಾಾ ಸ್ಪಂದಿಸುವ ಅವರ ಗುಣ ಎಲ್ಲರಿಗೂ ಇಷ್ಟವಾಗುವಂತಹದ್ದು. ಅಧಿಕಾರ ಸಿಕ್ರೆ ಸಾಕು ಕಾಲಿಗೊಂದು ಜನ ಕೈಗೊಂದು ಜನ ಅನ್ನುವವರ ಮಧ್ಯೆ ಸುರೇಶ್ ಕುಮಾರ್ ಅವರು ಯಾವಾಗಲೂ ಭಿನ್ನ. ಸಚಿವ ಎಂಬ ಹಮ್ಮು ಬಿಮ್ಮು ಇಲ್ಲದ ನಾಯಕ.

ಇಂದು ಸುರೇಶ್ ಕುಮಾರ್ ಅವರು ತಾವೆಷ್ಟು ಸರಳ ಅನ್ನೋದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ರು. ಬೆಂಗಳೂರಿನ ವಲಯ ಉಸ್ತುವಾರಿಗಳ ಸಭೆಗೆ ಸುರೇಶ್ ಕುಮಾರ್ ಅವರು ಕಾಲ್ನಡಿಗೆಯಲ್ಲೇ ಆಗಮಿಸಿದ್ರು. ವಿಧಾನಸೌಧದಿಂದ ಸಿಎಂ ಅಧಿಕೃತ ನಿವಾಸ ಕಾವೇರಿಗೆ ನಡೆದುಕೊಂಡೇ ಹೋದ್ರು ಸುರೇಶ್ ಕುಮಾರ್. ತಾನೊಬ್ಬ ಸಚಿವ ಎಂಬ ಅಹಂಕಾರವಿಲ್ಲದ ಇವರ ವರ್ತನೆಯಿಂದಲೇ ಇವರು ಸದಾ ಜನರಿಗೆ ಹತ್ತಿರವಾಗ್ತಾರೆ.

- Advertisement -

Latest News

error: Content is protected !!