Friday, June 5, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿ ಕೊರೊನಾ ರುದ್ರ ನರ್ತನ, 3648 ಮಂದಿಗೆ ಕೋವಿಡ್ ಪಾಸಿಟಿವ್, 72 ಜನ ಮಹಾಮಾರಿಗೆ ಬಲಿ,...

ರಾಜ್ಯದಲ್ಲಿ ಕೊರೊನಾ ರುದ್ರ ನರ್ತನ, 3648 ಮಂದಿಗೆ ಕೋವಿಡ್ ಪಾಸಿಟಿವ್, 72 ಜನ ಮಹಾಮಾರಿಗೆ ಬಲಿ, ಸಿಲಿಕಾನ್ ಸಿಟಿಯಲ್ಲಿ 1452 ಹೊಸ ಪ್ರಕರಣಗಳು ಪತ್ತೆ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸದ್ಯಕ್ಕಂತೂ ತನ್ನ ಆರ್ಭಟ ಕಮ್ಮಿ ಮಾಡುವ ಯಾವ ಲಕ್ಷಣಗಳೂ ಕೂಡ ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಇಂದು ಬರೋಬ್ಬರಿ 3648 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67,420 ಕ್ಕೆ ಏರಿಕೆಯಾಗಿದೆ. ಇನ್ನು 72 ಜನ ಇವತ್ತು ರಾಜ್ಯದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಹಾಗೇ ರಾಜ್ಯದ ಬೇರೆ ಬೇರೆ ಕೋವಿಡ್ ಆಸ್ಪತ್ರೆಗಳಿಂದ 730 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಉದ್ಯಾನನಗರಿ ಬೆಂಗಳೂರಿನಲ್ಲಿ 1452 ಹೊಸ ಕೊರೊನಾ ಪ್ರಕರಣಗಳು ಇಂದು ಪತ್ತೆಯಾಗಿವೆ. ಆ ಮೂಲಕ ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 33,229ಕ್ಕೆ ಏರಿಕೆಯಾಗಿದೆ. ಹಾಗೇ 31 ಮಂದಿಯನ್ನು ಬೆಂಗಳೂರಿನಲ್ಲಿ ಕೊರೊನಾ ಬಲಿ ಪಡೆದುಕೊಂಡಿದೆ. 163 ಮಂದಿ ಕೊರೊನಾದಿಂದ ಗುಮಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

- Advertisement -

Latest News

error: Content is protected !!