- Advertisement -
![]()
- Advertisement -
ಉಡುಪಿ: ಹಾಸ್ಟೆಲ್ ನಿಂದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಎಸ್‌ಆರ್ ಆಂಗ್ಲ ಮಾಧ್ಯಮ ಶಾಲೆಯ ಹಾಸ್ಟೆಲ್‌ನಲ್ಲಿ ನಡೆದಿದೆ. ಅಭಿನಂದನ್(15 ನಾಪತ್ತೆಯಾದ ವಿದ್ಯಾರ್ಥಿ.
ಅಭಿನಂದನ್ ಏ.25ರಂದು ಸಂಜೆ ತನ್ನ ಸಹಪಾಠಿ ಯಿಂದ 500ರೂ. ಪಡೆದು ತಂದೆ ತಾಯಿ ನೆನಪಾಗುತ್ತಿದೆ ಮನೆಗೆ ಹೋಗುತ್ತೇನೆ ಎಂದು ಹೇಳಿ ಶಾಲೆಯ ಹಾಸ್ಟೆಲ್ ನಿಂದ ಹೋಗಿದ್ದಾನೆ. ಆದರೆ ಆತ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -


