Saturday, June 13, 2026
Homeಕರಾವಳಿಕಡಬದ ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ

ಕಡಬದ ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ

- Advertisement -
- Advertisement -

ಕಡಬ: ಹೆಸರಾಂತ ಕಬಡ್ಡಿ ಆಟಗಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಏ.24 ರಂದು ನಡೆದಿದೆ.

ಮಿದುಳು ರಕ್ತಸ್ರಾವ (ಬ್ರೈನ್ ಹ್ಯಾಮರೇಜ್)ದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕಡಬ ತಾಲೂಕು ಕೊಂಬಾರು ಗ್ರಾಮದ ಕಮರ್ಕಜೆ ಶಿನಪ್ಪ ಗೌಡ ಎಂಬವರ ಪುತ್ರ ಕೋಕಿಲಾನಂದ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಅವರು ಮಿದುಳು ರಕ್ತಸ್ರಾವ ಉಲ್ಬಣಗೊಂಡು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇವರ ಚಿಕಿತ್ಸೆಯ ನೆರವಿಗಾಗಿ ಅನೇಕ ಸಂಘ ಸಂಸ್ಥೆಗಳು, ಗ್ರಾಮದ ನಿವಾಸಿಗಳು, ಕಬಡ್ಡಿ ಪ್ರೇಮಿಗಳು ಆರ್ಥಿಕ ಸಹಕಾರ ನೀಡಿದ್ದರು.

ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. 

- Advertisement -

Latest News

error: Content is protected !!