Saturday, June 13, 2026
Homeಕರಾವಳಿಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತೂಟೆ ದಾರ ಆಚರಣೆ; 300ಕ್ಕೂ ಹೆಚ್ಚು ಭಕ್ತರು ಭಾಗಿ

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತೂಟೆ ದಾರ ಆಚರಣೆ; 300ಕ್ಕೂ ಹೆಚ್ಚು ಭಕ್ತರು ಭಾಗಿ

- Advertisement -
- Advertisement -

ಮಂಗಳೂರು: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗ ತೂಟೆ ದಾರ ಆಚರಣೆ ನಡೆಯಿತು.

ಜಾತ್ರೆಯ ಅಂಗವಾಗಿ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ನಡೆಯುವ ಬೆಂಕಿಯ ಕಾದಾಟ ಇದಾಗಿದ್ದು, ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರ ನಡುವೆ ಕಾದಾಟ ನಡೆಯಿತು.

ಆಚರಣೆಯಲ್ಲಿ ಬೆಂಕಿಯ ಜ್ವಾಲೆಯಿರುವ ದೀವಟಿಗೆಯನ್ನು ಪರಸ್ಪರ ಎಸೆಯಲಾಯಿತು.‌ ಭಾಗವಹಿಸಿದ್ದ ಎರಡು ತಂಡಗಳಿಗೂ ದೇವರ ಅವಭೃತದ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.

ದುಷ್ಟ ಶಕ್ತಿಗಳನ್ನು ಸಂಹರಿಸಿದ ದೇವಿಯನ್ನು ಸಂತುಷ್ಟಗೊಳಿಸಲು ಎಂಬ ನಂಬಿಕೆಯಿಂದ ಗ್ರಾಮಸ್ಥರ ನಡುವೆ ನಡೆಯುವ ಬೆಂಕಿಯ ಆಟವಾಗಿದ್ದು, ದುರ್ಗಾ ಪರಮೇಶ್ವರಿ ಜಾತ್ರೆಯ ಕೊನೆಯ ದಿನ ನಡೆಯುವ ವಿಶೇಷ ಆಚರಣೆಯಾಗಿದೆ.ಈ ಬಾರಿಯ ತೂಟೆದಾರ ದಲ್ಲಿ ಮುನ್ನೂರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು.

- Advertisement -

Latest News

error: Content is protected !!