Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ:ಬಸ್ ನಲ್ಲಿ ಪ್ರಯಾಣಿಕರು ತುಂಬಿ ತುಳುಕಿದ್ದರಿಂದ ಉಸಿರಾಟ ಸಮಸ್ಯೆ ಎದುರಿಸಿದ ಮಹಿಳೆ

ಬೆಳ್ತಂಗಡಿ:ಬಸ್ ನಲ್ಲಿ ಪ್ರಯಾಣಿಕರು ತುಂಬಿ ತುಳುಕಿದ್ದರಿಂದ ಉಸಿರಾಟ ಸಮಸ್ಯೆ ಎದುರಿಸಿದ ಮಹಿಳೆ

- Advertisement -
- Advertisement -

ಬೆಳ್ತಂಗಡಿ:ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಕರು ತುಂಬಿ ತುಳುಕಿದ್ದರಿಂದ ಮಹಿಳೆಯೊಬ್ಬರು ಉಸಿರಾಟ ಸಮಸ್ಯೆ ಎದುರಿಸಿದ ಘಟನೆ ಭಾನುವಾರ ರಾತ್ರಿ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ನಡೆದಿದೆ.

ಭಾನುವಾರವಾದ್ದರಿಂದ ಕೆಎಸ್ಆರ್‌ಟಿಸಿ ಬಸ್‌ಗಳು ಫುಲ್ ರಶ್ ಆಗಿತ್ತು‌. ಜೊತೆಗೆ ಹೆಚ್ಚಿನ ಬಸ್‌ಗಳಿಲ್ಲದೆ ಇರುವ ಬಸ್‌ಗಳಿಗೆ ಪ್ರಯಾಣಿಕರು ಹತ್ತಿದ ಪರಿಣಾಮ ಬಸ್ ರಶ್ ಆಗಿದೆ. ಪರಿಣಾಮ ಬಸ್‌ನೊಳಗೆ ಇದ್ದ ಮಹಿಳೆಯೊಬ್ಬರು ಉಸಿರಾಟ ಸಮಸ್ಯೆ ಎದುರಿಸಿದ್ದಾರೆ‌. ತಕ್ಷಣ ಪ್ರಯಾಣಿಕರು ಮಹಿಳೆಯನ್ನು ಹೊತ್ತು ಹೊರ ಬಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಬಸ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಸ್‌ಗಳನ್ನು ಕಡಿಮೆ ಆಪರೇಟ್ ಮಾಡುತ್ತಿದ್ದೀರಾ ಎಂದು ತರಾಟೆ ತೆಗೆದುಕೊಂಡು ಪುತ್ತೂರು ವಿಭಾಗದ ಕೆ‌ಎಸ್ಆರ್‌ಟಿಸಿ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

- Advertisement -

Latest News

error: Content is protected !!