Saturday, August 29, 2026
Homeಕರಾವಳಿಉಡುಪಿಮೇ .11ಕ್ಕೆ ನಿಗದಿಯಾಗಿದ್ದ ಗ್ರಾ.ಪಂ. ಗಳ ಉಪಚುನಾವಣೆ 15 ದಿನಗಳ ಕಾಲ ಮುಂದೂಡಿಕೆ

ಮೇ .11ಕ್ಕೆ ನಿಗದಿಯಾಗಿದ್ದ ಗ್ರಾ.ಪಂ. ಗಳ ಉಪಚುನಾವಣೆ 15 ದಿನಗಳ ಕಾಲ ಮುಂದೂಡಿಕೆ

- Advertisement -
- Advertisement -

ಬೆಂಗಳೂರು: ತೆರವಾಗಿದ್ದ ವಿವಿಧ ಗ್ರಾಮ ಪಂಚಾಯತ್ ಸ್ಥಾನಗಳ ಉಪ ಚುನಾವಣೆ ಮುಂದೂಡಲ್ಪಟ್ಟಿದೆ.‌

ರಾಜ್ಯದ 222 ಗ್ರಾಮ ಪಂಚಾಯತ್ ಗಳ 260 ಸ್ಥಾನಗಳಿಗೆ ಮೇ 11 ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಹದಿನೈದು ದಿನಗಳ ಕಾಲ ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.

ಚುನಾವಣಾ ಸಿದ್ದತೆಗೆ ಜಿಲ್ಲಾಧಿಕಾರಿಗಳು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಉಪಚುನಾವಣೆಯನ್ನು ಮುಂದೂಡಲಾಗಿದ್ದು, ನಾಳೆ ಹೊರಡಿಸಬೇಕಿದ್ದ ಚುನಾವಣಾ ಅಧಿಸೂಚನೆಯನ್ನು ಮುಂದೂಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನ ಕನಕಮಜಲು ಗ್ರಾ.ಪಂ., ಬಂಟ್ವಾಳ ತಾಲೂಕಿನ ಬಾಳ್ತಿಲ ಮತ್ತು ವಿಟ್ಲಮುಡ್ನೂರು ಗ್ರಾ.ಪಂ., ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಮತ್ತು ಪುದುವೆಟ್ಟು ಗ್ರಾ.ಪಂ., ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ., ಮೂಡಬಿದಿರೆ ತಾಲೂಕಿನ ಪುತ್ತಿಗೆ ಗ್ರಾ.ಪಂ., ಉಳ್ಳಾಲ ತಾಲೂಕಿನ ಕಿನ್ಯಾ ಮತ್ತು ಮುನ್ನೂರು ಗ್ರಾಮ ಪಂಚಾಯತ್ ಗಳ ತಲಾ ಒಂದು ಸ್ಥಾನಗಳಿಗೆ ನಿಗದಿಯಾಗಿದ್ದ ಉಪ ಚುನಾವಣೆ ಮುಂದೂಡಲ್ಪಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಉಡುಪಿ ತಾಲೂಕಿನ ಉದ್ಯಾವರ ಗ್ರಾ.ಪಂ., ಕಾಪು ತಾಲೂಕಿನ ಬೆಳ್ಳೆ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ಗಳ ತಲಾ ಒಂದು ಸ್ಥಾನಗಳ ಉಪಚುನಾವಣೆ ಮುಂದೂಡಲ್ಪಟ್ಟಿದೆ.

- Advertisement -

Latest News

error: Content is protected !!