Saturday, June 6, 2026
Homeಕರಾವಳಿಮಂಗಳೂರುಮೂಡಬಿದರೆ; ಕಸಾಯಿಖಾನೆಗೆ ಕೊಂಡೊಯ್ಯಲು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ಗೋವುಗಳ ರಕ್ಷಣೆ

ಮೂಡಬಿದರೆ; ಕಸಾಯಿಖಾನೆಗೆ ಕೊಂಡೊಯ್ಯಲು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ಗೋವುಗಳ ರಕ್ಷಣೆ

- Advertisement -
- Advertisement -

ಮೂಡಬಿದರೆ; ಕಸಾಯಿಖಾನೆಗೆ ಕೊಂಡೊಯ್ಯಲು ಕಟ್ಟಿ ಹಾಕಿದ್ದ ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ಮೂಡಬಿದರೆ ತೋಡಾರು ಗ್ರಾಮದ ಬಂಗಬೆಟ್ಟು ಶಾಲೆಯ ಹಿಂಭಾಗದ ಗುಡ್ಡದಲ್ಲಿ ನಡೆದಿದೆ.

ದುಷ್ಕರ್ಮಿಗಳು ಕಸಾಯಿ ಖಾನೆಗೆ ಒಯ್ಯಲು ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಎಲ್ಲಿಂದಲೂ ಕದ್ದು ತಂದು ಗುಡ್ಡದಲ್ಲಿ ಕಟ್ಟಿ ಹಾಕಲಾಗಿತ್ತು ಬೆಳಗ್ಗೆ ಸುಮಾರು 6 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಕೂಡಲೇ ಸ್ಥಳಕ್ಕೆ ತೆರಳಿ ಎರಡು ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿ ಅವುಗಳನ್ನು ಗೋಶಾಲೆಗೆ ಸಾಗಿಸಿದ್ದಾರೆ.

ಪೊಲೀಸ್ ಇಲಾಖೆ ಗೋವುಗಳನ್ನು ಕಟ್ಟಿ ಹಾಕಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆಯ ಮೂಡಬಿದ್ರೆ ತಾಲೂಕು ಸಹಸಂಯೋಜಕ ಶರತ್ ಮಿಜಾರ್ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!