Wednesday, June 3, 2026
Homeಕರಾವಳಿಮಂಗಳೂರು ಬೆಳ್ತಂಗಡಿ : ಪಿಲಿಗೂಡು ಯಾಂತ್ರಡ್ಕದಲ್ಲಿ ಕಳ್ಳತನ; ನಗ‌- ನಗದು ದೋಚಿ ಪರಾರಿಯಾದ ಖದೀಮ

 ಬೆಳ್ತಂಗಡಿ : ಪಿಲಿಗೂಡು ಯಾಂತ್ರಡ್ಕದಲ್ಲಿ ಕಳ್ಳತನ; ನಗ‌- ನಗದು ದೋಚಿ ಪರಾರಿಯಾದ ಖದೀಮ

- Advertisement -
- Advertisement -

ಬೆಳ್ತಂಗಡಿ : ಪಿಲಿಗೂಡು ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ  ಉಸ್ಮಾನ್ ಎಂಬುವರು ಮನೆಯಲ್ಲಿ ಕಳ್ಳರು ಮನೆಯೊಳಗೆ ಪ್ರವೇಶಿಸಿ ನಗ ಹಾಗೂ ನಗದು ಎಗರಿಸಿದ ಘಟನೆ ಏ 10 ರಂದು ನಡೆದಿದೆ.

ಮಾವಿನಕಟ್ಟೆ ಸಮೀಪದ ಯಾಂತ್ರಡ್ಕ ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಉಸ್ಮಾನ್ ಎಂಬುವರು ಮನೆಯೊಳಗೆ ಹೊಕ್ಕ ಕಳ್ಳರು ಸುಮಾರು 58 ಸಾವಿರ ರೂಪಾಯಿ ಹಾಗೂ 2 ಪವನ್ ಚಿನ್ನವನ್ನು ಕಾಪಟು ಹೊಡೆದು ದೋಚಿ ಪರಾರಿಯಾಗಿದ್ದಾರೆ.

ಉಸ್ಮಾನ್ ಹಾಗೂ ಮನೆಯವರು ಬೆಳ್ಳಗ್ಗೆ 10:30  ಗಂಟೆಗೆ ವೇಳೆ ಮನೆಯರು ಮದುವೆ ಕಾರ್ಯಕ್ರಮ ಹೋಗಿದ್ದು ಸಂಜೆ 3: 30 ಗಂಟೆಗೆ ವೇಳೆ ಬರುವಾಗ ಈ ಘಟನೆ ನಡೆದಿದೆ.  ಬಡ ವರ್ಗದ ಕುಟುಂಬ ಉಸ್ಮಾನ್ ಅವರಾದಗಿದ್ದು ಸಾಲಕ್ಕೆ ಪಡೆದುಕೊಂಡಿರುವ ಮೊತ್ತವನ್ನು ಹಿಂತಿರುಗಿಸಲು ಕಪಾಟಿನಲ್ಲಿ ಇಟ್ಟಿದ್ದರು.  ಆದರೆ ಖದೀಮರು ಅದನ್ನೇ ಎಗರಿಸಿ ಮನೆಯ ಹಿಂಬಾದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ.ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಐಪಿಎಸ್ ಅಧಿಕಾರಿ ಮನೀಷಾ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!