Friday, June 5, 2026
HomeUncategorizedಮಂಗಳೂರು: ಹಣ, ಮೊಬೈಲ್ ಕದ್ದು ಸಾರ್ವಜನಿಕರಿಗೆ ಸಿಕ್ಕಿಬಿದ್ದ  ಕಳ್ಳ

ಮಂಗಳೂರು: ಹಣ, ಮೊಬೈಲ್ ಕದ್ದು ಸಾರ್ವಜನಿಕರಿಗೆ ಸಿಕ್ಕಿಬಿದ್ದ  ಕಳ್ಳ

- Advertisement -
- Advertisement -

 ಮಂಗಳೂರು: ಹಣ, ಮೊಬೈಲ್ ಕದ್ದು ಸಾರ್ವಜನಿಕರಿಗೆ ಕಳ್ಳ ಸಿಕ್ಕಿಬಿದ್ದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಧಾರವಾಡ ನಿವಾಸಿ ಕುಮಾರ್ (38) ಬಂಧಿತ ಆರೋಪಿ.

ಮುಲ್ಕಿ ಬಸ್ ನಿಲ್ದಾಣದ ಬಳಿಯ ಪುತ್ರನ್ ಮೂಲಸ್ಥಾನದ ಒಳಗಡೆ ಮಹಿಳೆಯೊಬ್ಬರು ಮೊಬೈಲ್ ಹಾಗೂ ಪರ್ಸನ್ನು ಕೆಳಗೆ ಇಟ್ಟು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವೇಳೆ ಆರೋಪಿ ಕುಮಾರ್ ಮಹಿಳೆಯ ಮೊಬೈಲ್ ಮತ್ತು ಪರ್ಸನ್ನು ಕಳ್ಳತನ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಮುಲ್ಕಿ ಬಸ್ ನಿಲ್ದಾಣಕ್ಕೆ ಬಂದು ಅನುಮಾನಾಸ್ಪದ ವ್ಯಕ್ತಿಯಂತೆ ವರ್ತಿಸಿದಾಗ ಸ್ಥಳೀಯರಿಗೆ ಸಂಶಯ ಬಂದು ಆತನನ್ನು ವಿಚಾರಿಸಿದಾಗ ಆತನ ಬಳಿ ಮೂರು ಮೊಬೈಲ್ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಆತನನ್ನು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!