Sunday, June 7, 2026
Homeಕರಾವಳಿಉಡುಪಿಬೆಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಕಾರು ಪಲ್ಟಿ; ನಾಲ್ವರು ಪತ್ರಕರ್ತರಿಗೆ ಗಾಯ

ಬೆಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಕಾರು ಪಲ್ಟಿ; ನಾಲ್ವರು ಪತ್ರಕರ್ತರಿಗೆ ಗಾಯ

- Advertisement -
- Advertisement -

ಬೆಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಕಾರು ಪಲ್ಟಿಯಾಗಿ ನಾಲ್ವರು ಪತ್ರಕರ್ತರಿಗೆ ಗಾಯಗಳಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ನಡೆದಿದೆ. ಶನಿವಾರ ಸಂಜೆ ಘಟನೆ ನಡೆದಿದ್ದು  ನಾಲ್ವರು ಪತ್ರಕರ್ತರಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.


ಆಲೂರು ತಾಲೂಕಿನ ಪಾಳ್ಯ ಬಳಿಯ ಶ್ರೀ ಶನೀಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪತ್ರಕರ್ತರು ಉಡುಪಿಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಟಿವಿ ಭಾರತ್ ವರದಿಗಾರ ಸಂದೀಪ್ ಗಂಭೀರ ಗಾಯಗೊಂಡರೆ, ಪ್ರಜಾ ಟಿವಿ ವರದಿಗಾರರಾದ ಜಯಂತ್, ಸ್ಪಂದನ ಚಾನೆಲ್ ನ ನಾಗರಾಜ್ ಮತ್ತು ಸುದರ್ಶನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಸಕಲೇಶಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

Latest News

error: Content is protected !!