Thursday, June 4, 2026
Homeಆರಾಧನಾಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಗಣಪತಿ ಹೋಮ, ಅತಿಮಹಾರುದ್ರ ಪಾರಾಯಣ

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಗಣಪತಿ ಹೋಮ, ಅತಿಮಹಾರುದ್ರ ಪಾರಾಯಣ

- Advertisement -
- Advertisement -

ಬಂಟ್ವಾಳ: ಮೊಗರ್ ನಾಡು ಸಾವಿರ ಸೀಮೆಯ ಒಡೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ವಠಾರದಲ್ಲಿ ಜರಗಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಇಂದು ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಗಣಪತಿ ಹೋಮ, ಅತಿಮಹಾರುದ್ರ ಪಾರಾಯಣ ವಿದ್ವಾನ್ ವೇದಮೂರ್ತಿ ಅನಂತ ಭಟ್ ಓಣಿ ಬೈಲು ನೇತೃತ್ವದಲ್ಲಿ ನಡೆಯಿತು.

ಪ್ರತಿನಿತ್ಯ ಶ್ರೀ ಕ್ಷೇತ್ರದಲ್ಲಿ ಈ ಪಾರಾಯಣ ಮೇ 4 ರಂದು ನಡೆಯುವ ಯಾಗದ ವರೆಗೂ ನಡೆಯಲಿದ್ದು ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲುಪಡೆಯಬೇಕಾಗಿ ವಿನಂತಿ. ಇಂದಿನ ಕಾರ್ಯಕ್ರಮದಲ್ಲಿ ಗೌರವಧ್ಯಕ್ಷರಾದ ರಘುನಾಥ ಸೋಮಯಾಜಿ, ಕಾರ್ಯಧ್ಯಕ್ಷರಾದ ಜಗನ್ನಾಥ ಚೌಟ ಭಾಗವಹಿಸಿದ್ದರು.

- Advertisement -

Latest News

error: Content is protected !!