Thursday, June 4, 2026
Homeಕರಾವಳಿಉಡುಪಿಉಡುಪಿ: ಜೀಪಿಗೆ ಕಾರು ಡಿಕ್ಕಿ, ಓರ್ವ ಸಾವು, ಐವರಿಗೆ ಗಾಯ

ಉಡುಪಿ: ಜೀಪಿಗೆ ಕಾರು ಡಿಕ್ಕಿ, ಓರ್ವ ಸಾವು, ಐವರಿಗೆ ಗಾಯ

- Advertisement -
- Advertisement -

ಉಡುಪಿ: ಜೀಪಿಗೆ ಕಾರು ಡಿಕ್ಕಿಯಾಗಿ, ಓರ್ವ ಸಾವನ್ನಪ್ಪಿ ಐವರಿಗೆ ಗಾಯಗಳಾಗಿರುವ ಘಟನೆ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿ ಸಂಭವಿಸಿದೆ. ಬಸ್ತೇವ್(53) ಮೃತರು.

ಕಾರು ಚಾಲಕ ಮನೋಜ್, ಆಶಾ, ನಿಶಾ, ಅರ್ಪಿತಾ, ಜೀಪು ಚಾಲಕ ಬೀರಪ್ಪ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಬ್ರಿ ಕಡೆಯಿಂದ ಸೋಮೇಶ್ವರ ಕಡೆ ಹೋಗುತ್ತಿದ್ದ ಜೀಪುಸೋಮೆಶ್ವರ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಎರಡು ವಾಹನಗಳಲ್ಲಿದ್ದ ಆರು ಗಾಯಗೊಂಡಿದ್ದು, ಇದರಲ್ಲಿ ಗಂಭೀರವಾಗಿ ಗಾಯಗೊಂಡ ಕಾರಿನಲ್ಲಿದ್ದ ಬಸ್ತೇವ್ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!