Friday, June 27, 2025
Homeಕರಾವಳಿಮಂಗಳೂರುವಿಟ್ಲ; ಒಡೆದ ಟಯರ್ ನಲ್ಲೇ ಬಸ್ ಓಡಿಸಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ; ಬಸ್ ನ್ನು...

ವಿಟ್ಲ; ಒಡೆದ ಟಯರ್ ನಲ್ಲೇ ಬಸ್ ಓಡಿಸಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ; ಬಸ್ ನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

spot_img
- Advertisement -
- Advertisement -

ವಿಟ್ಲ; ಒಡೆದ ಟಯರ್ ನಲ್ಲೇ ಬಸ್ ಓಡಿಸಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬಸ್ ನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಸಾರಾ ಹೆಸರಿನ ಖಾಸಗಿ ಬಸ್ ಅನ್ನು ಎರಡು ದಿನಗಳಿಂದ ಹಿಂಬದಿ ಕೇವಲ ಒಂದು ಟೈಯರ್ ನಲ್ಲಿ ಇನ್ನೊಂದು ಬದಿಯಲ್ಲಿ ಒಡೆದ ಟಯರ್ ಆಳವಡಿಸಿ ವಿಟ್ಲ -ಮುಡಿಪು ಮಧ್ಯೆ ಸಂಚರಿಸುತ್ತಿದ್ದ ಓಡಿಸಲಾಗುತ್ತಿತ್ತು. ಈ ಖಾಸಗಿ ಬಸ್ಸನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶನಿವಾರ ಮಧ್ಯಾಹ್ನದಿಂದ ಭಾನುವಾರ ಮಧ್ಯಾಹ್ನ ತನಕ ವಿಟ್ಲ ಮುಡಿಪು ಮಂಗಳೂರು ಮಧ್ಯೆ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಾ ಪ್ರಯಾಣಿಕರ ಪ್ರಾಣದಲ್ಲಿ ಬಸ್ ಸಿಬ್ಬಂದಿಚೆಲ್ಲಾಟ ಆಡುತ್ತಿದ್ದರೆಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!