Saturday, June 6, 2026
Homeಕರಾವಳಿಆಳ್ವಾಸ್‌ ಸಂಸ್ಥೆಯಿಂದ 12,000ಕ್ಕೂ ಅಧಿಕ ಮಂದಿಗೆ ಇಫ್ತಾರ್‌ ಕೂಟ 

ಆಳ್ವಾಸ್‌ ಸಂಸ್ಥೆಯಿಂದ 12,000ಕ್ಕೂ ಅಧಿಕ ಮಂದಿಗೆ ಇಫ್ತಾರ್‌ ಕೂಟ 

- Advertisement -
- Advertisement -

ಮೂಡುಬಿದಿರೆ: ವಿದ್ಯಾಗಿರಿಯ ಕೃಷಿಸಿರಿ ಆವರಣದಲ್ಲಿ ರಮ್ಜಾನ್‌ ಪ್ರಯುಕ್ತ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಲ್ಲದೆ ಸ್ಥಳೀಯರಿಗೂ 22ನೇ ವರ್ಷದ ಇಫ್ತಾರ್‌ ಕೂಟವನ್ನು ಆಯೋಜಿಸಲಾಗಿದ್ದು, 12,000ಕ್ಕೂ ಅಧಿಕ ಮಂದಿ ಕೂಟದಲ್ಲಿ  ಪಾಲ್ಗೊಂಡಿದ್ದರು. 

ಇಫ್ತಾರ್‌ ಬಳಿಕ ಸಾಮೂಹಿಕ ನಮಾಜ್‌ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನಮಾಜ್‌ಗೆ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬೀದರ್‌ನ ಶಾಯಿನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ ಅಧ್ಯಕ್ಷ ಅಬ್ದುಲ್‌ ಖಾದಿರ್‌ ಶಾಯಿನ್‌, ‘ದೇಶದ ಎಲ್ಲ ಭಾಷೆ, ಜಾತಿ, ಮತಗಳ ಜನರು ಸೌಹಾರ್ದದಿಂದ ಬದುಕಬೇಕು. ಈ ನೆಲೆಯಲ್ಲಿ ಆಳ್ವಾಸ್‌ ಸಂಸ್ಥೆಯು ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪ ಡಿಸಿರುವುದು ಶ್ಲಾಘನೀಯ,’ ಎಂದು ಹೇಳಿದರು.

ಕೂಟದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್‌ ಕುಂಞಿ ರಮ್ಜಾನ್‌ ಸಂದೇಶ ನೀದರು.

ಉಡುಪಿಯ ಅಪರ ಜಿಲ್ಲಾಧಿಕಾರಿ ಅಭಿದ್‌ ಗದ್ಯಲ್‌, ಆಳ್ವಾಸ್‌ ಟ್ರಸ್ಟಿ ವಿವೇಕ್‌ ಆಳ್ವ, ಡಾ| ವಿನಯ್‌ ಆಳ್ವ, ಉದ್ಯಮಿ ಮುಸ್ತಫಾ, ವಿಜಯಪುರದ ರೋಯಲ್‌ ಶಾಲೆಯ ನಿರ್ದೇಶಕ ಮೊಹಮ್ಮದ್‌ ಇಂಡಿ, ಆಳ್ವಾಸ್‌ ಫಿಝೇರಿಯಾ ಹಾಗೂ ಬಿಸಿಸಿ ಮಾಲಕ ಎಂ. ಎಸ್‌. ಜೈನುದ್ದೀನ್‌ ಮೊದಲಾದವರು ಉಪಸ್ಥಿತರಿದ್ದರು. 

- Advertisement -

Latest News

error: Content is protected !!