Wednesday, June 3, 2026
Homeಕರಾವಳಿಮಂಗಳೂರುಮೂಡಬಿದ್ರಿ: ಬ್ರಹ್ಮಕಲಶೋತ್ಸವದಲ್ಲಿ ಅಹರ್ನಿಶಿ ಸೇವೆ ಮಾಡುತ್ತಿದ್ದಾಗಲೇ ಹೃದಯಾಘಾತ;  ಭಜರಂಗ ದಳದ ನಗರ ಸಂಯೋಜಕ ವಿಜೇಶ್ ನಿಧನ

ಮೂಡಬಿದ್ರಿ: ಬ್ರಹ್ಮಕಲಶೋತ್ಸವದಲ್ಲಿ ಅಹರ್ನಿಶಿ ಸೇವೆ ಮಾಡುತ್ತಿದ್ದಾಗಲೇ ಹೃದಯಾಘಾತ;  ಭಜರಂಗ ದಳದ ನಗರ ಸಂಯೋಜಕ ವಿಜೇಶ್ ನಿಧನ

- Advertisement -
- Advertisement -

ಮೂಡಬಿದ್ರಿ: ಬ್ರಹ್ಮಕಲಶೋತ್ಸವದಲ್ಲಿ ಅಹರ್ನಿಶಿ ಸೇವೆ ಮಾಡುತ್ತಿದ್ದಾಗಲೇ ಭಜರಂಗ ದಳದ ಮೂಡಬಿದ್ರೆ ನಗರ ಸಂಯೋಜಕ ವಿಜೇಶ್ (30)  ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.  ವಿಜೇಶ್  ಪುತ್ತಿಗೆ ಶ್ರೀ ಸೋಮನಾಥೇಶ್ವರನ ಬ್ರಹ್ಮಕಲಶೋತ್ಸವದಲ್ಲಿ ಅಹರ್ನಿಶಿ ಸೇವೆ ಮಾಡುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತವಾಗಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ತಡ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡುಬಿದಿರೆ ನಗರ ಸಂಯೋಜಕ ಸಮಾಜಮುಖಿ ಚಿಂತನೆಯುಳ್ಳ ಸಕ್ರಿಯ ಕಾರ್ಯಕರ್ತ ವಿಜೇಶ್ ಅವರ ನಿಧನಕ್ಕೆ ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಹಲವಾರು ಗಣ್ಯರು, ಭಜರಂಗದಳದ ಮುಖಂಡರು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!