Friday, June 5, 2026
Homeಕರಾವಳಿಮಂಗಳೂರುಬಂಟ್ವಾಳ: ಚಲಿಸುತ್ತಿದ್ದ ಬಸ್ ನಿಂದ ಬಿದ್ದ ಮೊಬೈಲ್ ; ಐದು ಕಾರುಗಳ ಮಧ್ಯೆ ಸರಣಿ ಅಪಘಾತ

ಬಂಟ್ವಾಳ: ಚಲಿಸುತ್ತಿದ್ದ ಬಸ್ ನಿಂದ ಬಿದ್ದ ಮೊಬೈಲ್ ; ಐದು ಕಾರುಗಳ ಮಧ್ಯೆ ಸರಣಿ ಅಪಘಾತ

- Advertisement -
- Advertisement -

ಬಂಟ್ವಾಳ: ಚಲಿಸುತ್ತಿದ್ದ ಬಸ್ ನಿಂದ ಬಿದ್ದ ಮೊಬೈಲ್ ಪರಿಣಾಮ ಐದು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಘಟನೆ ರಾ.ಹೆ.75ರ ಬಿ.ಸಿ.ರೋಡಿನ ತಲಪಾಡಿಯಲ್ಲಿ ನಡೆದಿದೆ.

ಬಿ.ಸಿ.ರೋಡು ಕೈಕಂಬ ಚಾವಡಿಗುತ್ತು ಮನೆ ನಿವಾಸಿ ಅನಿತಾ ಮರಿಯ ಲೋಬೊ ಅವರು ಫೆ.25ರಂದು ಕಾರಿನಲ್ಲಿ ಫರಂಗಿಪೇಟೆ ಕಡೆಯಿಂದ ಕೈಕಂಬಕ್ಕೆ ಆಗಮಿಸುತ್ತಿದ್ದಾಗ ತಲಪಾಡಿಯಲ್ಲಿ ಮುಂದೆ ಸಾಗುತ್ತಿದ್ದ ಬಸ್ಸಿನಿಂದ ಪ್ರಯಾಣಿಕರೊಬ್ಬರ ಮೊಬೈಲ್ ಅವರ ಕಾರಿನ ಬೋನೆಟ್ ಮೇಲೆ ಬಿದ್ದಿದೆ. ಈ ವೇಳೆ ಅವರು ದಿಢೀರ್ ಬ್ರೇಕ್ ಹಾಕಿದ್ದು, ಆ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ನಾಲ್ಕು ಕಾರುಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡಿವೆ. ಘಟನೆಯಲ್ಲಿ ಕಾರುಗಳಿಗೆ ಹಾನಿಯಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!