Thursday, June 4, 2026
Homeಅಪರಾಧರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಮೇಲೆ ಗಂಭೀರ ಆರೋಪ; ಮೊಬೈಲ್ ಸರಣಿ ಪ್ರಾಣಿ ಬಲಿ ವಿಡಿಯೋಗಳು ಲಭ್ಯ

ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಮೇಲೆ ಗಂಭೀರ ಆರೋಪ; ಮೊಬೈಲ್ ಸರಣಿ ಪ್ರಾಣಿ ಬಲಿ ವಿಡಿಯೋಗಳು ಲಭ್ಯ

- Advertisement -
- Advertisement -

ಮಂಗಳೂರು: ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.

ಇತ್ತೀಚಿಗಷ್ಟೇ ಬಿಜೈನ ಸೆಲೂನ್‌ನಲ್ಲಿ ದಾಂಧಲೆ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರು ಪ್ರಸಾದ್ ಅತ್ತಾವರ ಅವರ ಮೊಬೈಲ್ ಅನ್ನು ಪೊಲೀಸರು ಪರಿಶೀಲಿಸಿದಾಗ ಶಕ್ತಿ ದೇವತೆಯ ಮುಂದೆ ಪ್ರಾಣಿಯೊಂದನ್ನು ಬಲಿಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್‌ಟಿಐ ಕಾರ್ಯಕರ್ತ ಫೋಟೋಗೆ ಹಚ್ಚಿರುವ ವೀಡಿಯೋ ಪೊಲೀಸರಿಗೆ ಲಭ್ಯವಾಗಿದೆ. 

ಅಷ್ಟೇಅಲ್ಲದೆ ಅತ್ತಾವರ ಅವರ ಮೊಬೈಲ್ ನಲ್ಲಿ ಸರಣಿ ಪ್ರಾಣಿ ಬಲಿ ಮಾಡಿರುವ ವಿಡಿಯೋಗಳಿದ್ದು ಪೊಲೀಸರು ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಶಕ್ತಿ ತುಂಬಲು ಈ ರೀತಿಯ ಪ್ರಾಣಿಬಲಿಯನ್ನು ಮಾಡುಲಾಗಿದೆ ಎನ್ನಲಾಗುತ್ತಿದೆ.

ಇನ್ನು ಈ ಪೂಜೆಗೋಸ್ಕರ ಅನಂತ್ ಭಟ್ ಎಂಬವರಿಗೆ ಪ್ರಸಾದ್ ಅತ್ತಾವರ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ವಿಚಾರವಾಗಿ ಈ ಇಬ್ಬರ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

- Advertisement -

Latest News

error: Content is protected !!